ಪಾಕ್ ಉಗ್ರರಿಗೆ ಭಾರತದ ಖಡಕ್ ಪ್ರತ್ಯುತ್ತರ: ಶಿವ ಅಷ್ಠಗಿ

IMG-20250507-WA0006
Published on

ವಿಜಯವಾಣಿ ಸುದ್ದಿಜಾಲ ಕಲಬುರಗಿ

ಏಪ್ರಿಲ್ ೨೨ರ ಪಹಲ್ಗಾಮ್ ಉಗ್ರರ ದಾಳಿಗೆ ಪ್ರತೀಕಾರವಾಗಿ ಭಾರತವು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಆಪರೇಷನ್ ಸಿಂಧೂರ ಹೆಸರಿನ ಏರ್‌ಸ್ಟ್ರೈಕ್ ಮೂಲಕ ಉಗ್ರರಿಗೆ ಪ್ರಬಲ ಪ್ರತ್ಯುತ್ತರ ನೀಡಿದೆ ಎಂದು ಬಿಜೆಪಿ ಯುವ ನಾಯಕ ಶಿವ ಅಷ್ಠಗಿ ಹೇಳಿದ್ದಾರೆ.

ಪಾಕಿಸ್ತಾನದ 9 ಭಯೋತ್ಪಾದಕ ನೆಲೆಗಳನ್ನು ಗುರಿಯಾಗಿಸಿಕೊಂಡು ಇಂದು ಮಧ್ಯರಾತ್ರಿ ಕಾರ್ಯಚರಣೆ ಆರಂಬಿಸಿದ ಭಾರತದ ಸೇನೆ ಅವರ ನೆಲೆಗಳನ್ನು ಧ್ವಂಸ ಮಾಡಲಾಗಿದ್ದು, ೨೦ಕ್ಕೂ ಹೆಚ್ಚು ಉಗ್ರರು ಹತರಾಗಿದ್ದಾರೆ ಮತ್ತು 55 ಮಂದಿ ಗಾಯಗೊಂಡಿರುವುದಾಗಿ ಮಾಹಿತಿ ಇದೆ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭಾರತ ಸರ್ಕಾರವು ದೇಶದ ನಾಗರೀಕರ ಮೇಲೆ ನಡೆದ ಹತ್ಯೆಯನ್ನು ಗಂಭೀರವಾಗಿ ಪರಿಗಣಿಸಿ ದೇಶದ ಮೇಲೆ ಕಣ್ಣು ಹಾಕಿರುವ ಉಗ್ರರಿಗೆ ಉಳಿಗಾಲವಿಲ್ಲವೆಂಬ ಖಡಕ್ ಸಂದೇಶವನ್ನು ಭಾರತೀಯ ಸೇನೆಯ ಮೂಲಕ ನೀಡಿದ್ದಾರೆ ಎಂದರು.

ಭಾರತ ಶಾಂತಿಯನ್ನು ಬಯಸುತ್ತದೆ ಆದರೆ ನಮ್ಮ ಮೇಲೆ ಎರಗಿಬಂದರೆ ಎದುರಾಳಿಯ ನೆಲೆಗಳಿಗೆ ನುಗ್ಗಿ ಹೊಡೆಯುತ್ತೇವೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇತ್ತೀಚಿಗೆ ದಾಳಿಯ ಮಾಡಿದ ಉಗ್ರರಿಗೆ ಪ್ರಬಲ ಸಂದೇಶ ರವಾನಿಸಿದ್ದರು ಎಂದು ಶಿವ ಅಷ್ಠಗಿ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net