ಸದ್ಯದಲ್ಲೇ ಹಸಿರು ಮಾರ್ಗದ ಈ ನಿಲ್ದಾಣಗಳ ನಡುವೆ 3 ದಿನ ಮೆಟ್ರೋ ಸೇವೆ ಸ್ಥಗಿತ!

Namma Metro
ಸಾಂದರ್ಭಿಕ ಚಿತ್ರ
Published on

ಬೆಂಗಳೂರು: ನಾಗಸಂದ್ರದಿಂದ ಮಾದಾವರವರೆಗಿನ ವಿಸ್ತರಿತ ಮಾರ್ಗದಲ್ಲಿ ಯೋಜಿತ ಕಾಮಗಾರಿ ಆರಂಭವಾಗುವ ಹಿನ್ನೆಲೆಯಲ್ಲಿ ನಮ್ಮ ಮೆಟ್ರೋ ಹಸಿರು ಮಾರ್ಗದ ಪೀಣ್ಯ-ನಾಗಸಂದ್ರ ನಿಲ್ದಾಣಗಳ ನಡುವೆ ಜ.26 ರಿಂದ ಮೂರು ದಿನಗಳ ಕಾಲ ಮೆಟ್ರೋ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತದೆ ಎಂದು ಬಿಎಂಆರ್​ಸಿಎಲ್​ ತಿಳಿಸಿದೆ.

ಈ ದಿನಗಳಲ್ಲಿ ಪೀಣ್ಯದಿಂದ ರೇಷ್ಮೆ ಸಂಸ್ಥೆ ನಿಲ್ದಾಣಗಳ ನಡುವೆ ಮಾತ್ರ ರೈಲು ಸೇವೆ ಲಭ್ಯವಿರುತ್ತದೆ. ಜ.29ರಿಂದ ಎಂದಿನಂತೆ ಬೆಳಗ್ಗೆ 5 ಗಂಟೆಯಿಂದ ಹಸಿರು ಮಾರ್ಗದ ನಾಗಸಂದ್ರ ಮತ್ತು ರೇಷ್ಮೆ ಸಂಸ್ಥೆ ನಡುವೆ ಸೇವೆಗಳು ಇರಲಿವೆ.

ತಾತ್ಕಾಲಿಕವಾಗಿ ರೈಲು ಸೇವೆ ಸ್ಥಗಿತದಿಂದ ಪೀಣ್ಯ ಇಂಡಸ್ಟ್ರಿ ಮತ್ತು ಗೊರಗುಂಟೆಪಾಳ್ಯ ಮೆಟ್ರೋ ನಿಲ್ದಾಣಗಳಲ್ಲಿ ಹೆಚ್ಚಿನ ಜನಸಂದಣಿ ಉಂಟಾಗುವ ನಿರೀಕ್ಷೆ ಇದೆ. ಈ ಸಂದರ್ಭದಲ್ಲಿ ಟಿಕೆಟ್​ ಖರೀದಿ ಸಮಯ ಉಳಿಸಲು ಪ್ರಯಾಣಿಕರು ಸ್ಮಾರ್ಟ್​ ಕಾರ್ಡ್​ ಟಿಕೆಟ್​, ಕ್ಯೂಆರ್​ ಕೋಡ್​ ಟಿಕೆಟ್​ ಸೇರಿದಂತೆ ಡಿಜಿಟಲ್​ ಟಿಕೆಟ್​ ಸೌಲಭ್ಯವನ್ನು ಬಳಸಬಹುದು ಎಂದು ಬಿಎಂಆರ್​ಸಿಎಲ್ ಹೇಳಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net