ಸಿಲಿಂಡರ್​​ ತುಂಬಿದ್ದ ಟೆಂಪೋ ಪಲ್ಟಿ; ಬೈಕ್​ ಸವಾರನ ಮೇಲುರುಳಿ ಗಂಭೀರ ಗಾಯ..

Gas
Published on

ರಾಮನಗರ: ರಾಜ್ಯದಲ್ಲಿ ವಾಹನಗಳು ಪಲ್ಟಿ ಆಗುತ್ತಿರುವ ಪ್ರಕರಣಗಳು ಹೆಚ್ಚುತ್ತಿದ್ದು, ಕೆಲವೇ ಗಂಟೆಗಳ ಮೊದಲು ಮದ್ಯ ತುಂಬಿದ್ದ ವಾಹನ ಪಲ್ಟಿ ಆದ ಬೆನ್ನಿಗೇ ಇದೀಗ ಗ್ಯಾಸ್​ ಸಿಲಿಂಡರ್​ಗಳನ್ನು ತುಂಬಿದ್ದ ಟೆಂಪೋ ಪಲ್ಟಿ ಆಗಿದೆ. ದುರಂತವೆಂದರೆ ಸಿಲಿಂಡರ್​​ ಬೈಕ್​ ಸವಾರನ ಮೇಲೆ ಬಿದ್ದು ಆತ ಗಂಭೀರವಾಗಿ ಗಾಯಗೊಂಡಿದ್ದಾನೆ.

ರಾಮನಗರ ತಾಲೂಕಿನ ಪಾದರಹಳ್ಳಿ ಗ್ರಾಮದ ತಿರುವಿನಲ್ಲಿ ಈ ಅಪಘಾತ ಸಂಭವಿಸಿದೆ. ಗ್ಯಾಸ್​ ಸಿಲಿಂಡರ್​ಗಳನ್ನು ತುಂಬಿಕೊಂಡು ಹೊರಟಿದ್ದ ಈ ಟೆಂಪೋ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ. ಅದೇ ಸಂದರ್ಭದಲ್ಲಿ ಸಾಗುತ್ತಿದ್ದ ಬೈಕ್​ ಮೇಲೂ ಸಿಲಿಂಡರ್​ ಬಿದ್ದಿದ್ದು, ಸವಾರ ಮಂಜುನಾಥ್ ಎಂಬಾತ ಗಂಭೀರವಾಗಿ ಗಾಯಗೊಂಡಿದ್ದಾನೆ. ಗಾಯಾಳುವನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಲಾಗಿದೆ.

ಮಾಗಡಿಯಿಂದ ರಾಮನಗರಕ್ಕೆ ಸಾಗುತ್ತಿದ್ದ ಈ ವಾಹನದಲ್ಲಿ ಸುಮಾರು 50 ಭಾರತ್ ಗ್ಯಾಸ್ ಸಿಲಿಂಡರ್​ಗಳಿದ್ದು, ಭಾರಿ ಅನಾಹುತವೊಂದು ತಪ್ಪಿಹೋಗಿದೆ. ಸಿಲಿಂಡರ್​​ ಸ್ಫೋಟಗೊಂಡಿದ್ದರೆ ಭೀಕರ ಅಗ್ನಿದುರಂತ ಸಂಭಿಸುವ ಸಾಧ್ಯತೆ ಇತ್ತು. ಸ್ಥಳಕ್ಕೆ ರಾಮನಗರ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net