ಸರ್ಕಾರದ ಹಿಡಿತದಿಂದ ದೇವಾಲಯಗಳು ಮುಕ್ತ

Kkd_Sowthadka
Published on

ವಿಜಯವಾಣಿ ಸುದ್ದಿಜಾಲ ಕೊಕ್ಕಡ

ದೇವಾಲಯಗಳನ್ನು ಸರ್ಕಾರದಿಂದ ಮುಕ್ತಗೊಳಿಸಲು ಮತ್ತು ಪ್ರತ್ಯೇಕ ಸ್ವಾಯತ್ತ ಮಂಡಳಿ ರಚಿಸುವಂತೆ ಆಗ್ರಹಿಸಿ ಪುತ್ತೂರು ಜಿಲ್ಲೆ ವಿಶ್ವಹಿಂದು ಪರಿಷತ್ ವತಿಯಿಂದ ಒಂದು ದಿನದ ಉಪವಾಸ ಸತ್ಯಾಗ್ರಹ ಭಾನುವಾರ ಬೆಳಗ್ಗಿನಿಂದ ಸಂಜೆಯವರೆಗೆ ಕೊಕ್ಕಡದ ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದಲ್ಲಿ ನಡೆಯಿತು.

ಹಿಂದು ಧಾರ್ಮಿಕ ಶ್ರದ್ಧಾ ಕೇಂದ್ರಗಳನ್ನು ಚುನಾಯಿತ ಸರ್ಕಾರ ವ್ಯಾಪಾರ ಕೇಂದ್ರಗಳಂತೆ ನಡೆಸುತ್ತಿರುವುದು ಹಿಂದುಗಳ ಮನಸ್ಸಿಗೆ ಘಾಸಿಯನ್ನುಂಟು ಮಾಡಿದೆ. ಹಿಂದು ದೇವಾಲಯಗಳನ್ನು ಸರ್ಕಾರದ ಹಿಡಿತದಿಂದ ಮುಕ್ತಿಗೊಳಿಸಲು ಒಂದು ದಿನದ ಉಪವಾಸ ಸತ್ಯಾಗ್ರಹ ಹಿಂದು ಧಾರ್ಮಿಕ ಧತ್ತಿ ಇಲಾಖೆ ಆಡಳಿತಕ್ಕೆ ಒಳಪಟ್ಟ (ಎ ಗ್ರೇಡ್,ಬಿ ಗ್ರೇಡ್, ಸಿ ಗ್ರೇಡ್) ದೇವಾಲಯಗಳನ್ನು ಸರ್ಕಾರದ ಹಿಡಿತದಿಂದ ವಿಮುಕ್ತಿಗೊಳಿಸಲು, ಹಿಂದು ಸ್ವಾಯತ್ತೆ ಮಂಡಳಿ ರಚಿಸಿ ಧಾರ್ಮಿಕ ಸ್ವಾತಂತ್ರೃ ಹಿಂದಿರುಗಿಸಬೇಕು ಎಂದು ಉಪವಾಸ ಸತ್ಯಾಗ್ರಹದಲ್ಲಿ ಒತ್ತಾಯಿಸಲಾಯಿತು. ಬೆಳಗ್ಗೆ ಸೌತಡ್ಕ ಕ್ಷೇತ್ರದಲ್ಲಿ ಮಹಾಗಣಪತಿಗೆ ಪೂಜೆ ಸಲ್ಲಿಸಿ, ಬಳಿಕ ಕೊಕ್ಕಡದ ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ ಅಧೀನದ ವಠಾರದಲ್ಲಿ ಹಾಕಲಾಗಿದ್ದ ಸಭಾಮಂಟಪದಲ್ಲಿ ಉಪವಾಸ ಸತ್ಯಾಗ್ರಹ ಕಾರ್ಯಕ್ರಮ ಆರಂಭಿಸಲಾಯಿತು.

ಕೊಕ್ಕಡದ ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ ಅಧ್ಯಕ್ಷ ಕೃಷ್ಣ ಭಟ್ ಕೊಕ್ಕಡ, ವೈದ್ಯ ಡಾ.ಮೋಹನ್ ದಾಸ್ ಗೌಡ ಸತ್ಯಾಗ್ರಹಕ್ಕೆ ಚಾಲನೆ ನೀಡಿದರು. ಸುಬ್ರಹ್ಮಣ್ಯ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ವಿಶ್ವಹಿಂದು ಪರಿಷತ್ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್‌ವೆಲ್, ವಿಭಾಗ ಸಹ ಕಾರ್ಯದರ್ಶಿ ಶಿವಾನಂದ ಮೆಂಡನ್, ವಿಭಾಗ ಸಾಮರಸ್ಯ ಪ್ರಮುಖ ಭಾಸ್ಕರ ಧರ್ಮಸ್ಥಳ, ಜಿಲ್ಲಾ ಅಧ್ಯಕ್ಷ ಕೃಷ್ಣ ಪ್ರಸನ್ನ, ಉಪಾಧ್ಯಕ್ಷ ಸತೀಶ್ ಬಿ.ಎಸ್., ಕಾರ್ಯದರ್ಶಿ ನವೀನ್ ನೆರಿಯ, ಸಹ ಕಾರ್ಯದರ್ಶಿ ಶ್ರೀಧರ್, ಪ್ರಮುಖರಾದ ಮೂಲಚಂದ್ರ ಕಾಂಚನ, ಪ್ರಮೋದ್ ಕಡಬ, ರಮೇಶ್ ಧರ್ಮಸ್ಥಳ, ಗಣೇಶ್ ಕಳೆಂಜ, ಸಂತೋಷ ಅತ್ತಾಜೆ, ಮೋಹನ್ ಬೆಳ್ತಂಗಡಿ, ಆರ್‌ಎಸ್‌ಎಸ್ ತಾ. ಸಂಘ ಚಾಲಕ ಗಣೇಶ್ ಕಾಂತಾಜೆ, ವಿಭಾಗ ಸಾಮರಸ್ಯ ಸಂಯೋಜಕ ಶಿಪಪ್ರಸಾದ್ ಮಲೆಬೆಟ್ಟು, ಧರ್ಮಾಚಾರ್ಯ ಪ್ರಮುಖ ಶಶಾಂಕ್ ಭಟ್, ಕಳೆಂಜ ಗೋಶಾಲೆ ಟ್ರಸ್ಟ್ ಅಧ್ಯಕ್ಷ ಡಾ.ಎಂ.ಎಂ.ದಯಾಕರ್., ಬಿ.ಎಂ.ಎಸ್ ಜಿಲ್ಲಾ ಅಧ್ಯಕ್ಷ ಅನಿಲ್ ಕುಮಾರ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕುಮಾರನಾಥ ಶೆಟ್ಟಿ, ವಿವಿಧ ಸಂಘಟನೆ, ದೇವಸ್ಥಾನ, ಧಾರ್ಮಿಕ ಕೇಂದ್ರಗಳ ಪ್ರಮುಖರಾದ ಕುಶಾಲಪ್ಪ ಗೌಡ ಪೂವಾಜೆ, ಹರೀಶ್ ರಾವ್ ಮುಂಡ್ರುಪ್ಪಾಡಿ, ಪುರುಷೋತ್ತಮ ಭಟ್ ವೇಣೂರು, ಪ್ರಸನ್ನ ದರ್ಬೆ, ಕಿಶೋರ್ ಶಿರಾಡಿ, ರವೀಶ್ ಪಡುಮಲೆ, ಬಾಲಕೃಷ್ಣ ನೈಮಿಷ, ಪ್ರಕಾಶ್ ಚಾರ್ಮಾಡಿ, ಭಾಸ್ಕರ ಪೈ, ಪ್ರಕಾಶ ನಾರಾಯಣ, ಪುರಂದರ ಗೌಡ, ಪ್ರಭಾಕರ ಗೌಡ, ಪುರುಷೋತ್ತಮ ಕೊಕ್ಕಡ, ರವಿಚಂದ್ರ ಪಿ., ಶಶಿಧರ ಕೊಕ್ಕಡ, ಗಣೇಶ್ ಕೊಕ್ಕಡ ಮೊದಲಾದವರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net