

ಬೆಂಗಳೂರು: ಇಡೀ ಜಗತ್ತಿನ ಜನರನ್ನು ತುದಿಗಾಲಿನಲ್ಲಿ ನಿಲ್ಲಿಸಿದ್ದ ಚಂದ್ರಯಾನ - 3ರ ವಿಕ್ರಮ್ ಲ್ಯಾಂಡರ್ ಚಂದ್ರನ ಅಂಗಳದಲ್ಲಿ ಯಶಸ್ವಿಯಾಗಿ ಇಳಿದಿದ್ದು, ಆ ಮೂಲಕ ಜನರ ಪ್ರಾರ್ಥನೆ ಲಿಸಿದೆ.
ವಿಕ್ರಮ್ ಲ್ಯಾಂಡರ್ ಚಂದ್ರನ ಅಂಗಳವನ್ನು ಯಶಸ್ವಿಯಾಗಿ ಸ್ಪರ್ಶಿಸಲೆಂದು ನಗರದಾದ್ಯಂತ ಬುಧವಾರ ಬೆಳಗ್ಗೆಯಿಂದಲೇ ದೇವಾಲಯಗಳು, ಮಸೀದಿ ಹಾಗೂ ಚರ್ಚುಗಳಲ್ಲಿ ವಿಶೇಷ ಪೂಜೆ ಹಾಗೂ ಪ್ರಾರ್ಥನೆ ನಡೆಯಿತು.
ಇಸ್ರೋದ ಅಧ್ಯಕ್ಷ ಎಸ್. ಸೋಮನಾಥ್ ಜಾಲಹಳ್ಳಿ ಕ್ರಾಸ್‌ನಲ್ಲಿರುವ ಸುಪ್ರಸಿದ್ಧ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಚಂದ್ರಯಾನ-3 ರ ಯಶಸ್ಸಿಗೆ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದರು.
ಗವಿಪುರದ ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ ಪ್ರಧಾನ ಅರ್ಚಕ ಸೋಮಸುಂದರ್ ದೀಕ್ಷಿತ್ ನೇತೃತ್ವದಲ್ಲಿ ನವಗ್ರಹ ಪೂಜೆ, ಚಂದ್ರ ಹೋಮವನ್ನು ನೆರವೇರಿಸಿದರು. ಚಂದ್ರಯಾನ-3 ನಿರ್ವಿಗ್ನವಾಗಿ ನೆರವೇರಲೆಂದು ಹಾಗೂ ಶುಭಲಗ್ನದಲ್ಲಿ ವಿಕ್ರಮ್ ಲ್ಯಾಂಡರ್ ಚಂದ್ರನಲ್ಲಿ ಇಳಿಯಲಿ ಎಂದು ಮಹಾಗಣಪತಿ ಹೋಮ, ಈಶ್ವರನ ಐದು ಮುಖ, ಚಂದ್ರಹೋಮ, ನವಗ್ರಹ ಪೂಜೆ ನಡೆಸಲಾಗಿದೆ ಎಂದು ದೀಕ್ಷಿತರು ಹೇಳಿದರು.
ಬಸವನಗುಡಿ ದೊಡ್ಡಗಣಪತಿ ದೇವಸ್ಥಾನದಲ್ಲಿ ಗಣಪತಿಗೆ ಬೆಣ್ಣೆಯ ಅಲಂಕಾರ ಮಾಡಿ, ರಾಷ್ಟ್ರಧ್ವವಿಟ್ಟು ಪೂಜೆ ಸಲ್ಲಿಸಲಾಯಿತು. ಮಲ್ಲೇಶ್ವರದ ಕಾಡುಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಚಂದ್ರದೇವರ ಮೂರ್ತಿಯಿಟ್ಟುಪೂಜೆ ಮಾಡಲಾಯಿತು. ಮಹಾಲಕ್ಷ್ಮೀಪುರ ಬಡಾವಣೆಯ ಗಂಗಾಧರೇಶ್ವರ ದೇವಸ್ಥಾನ ಸೇರಿ ನಗರದ ವಿವಿಧ ದೇವಾಲಯಗಳಿಗೆ ಭಕ್ತರು ಭೇಟಿ ನೀಡಿ ವಿಜ್ಞಾನಿಗಳ ಪರಿಶ್ರಮಕ್ಕೆ ನಿರೀಕ್ಷಿತ ಫಲ ದೊರಕಲೆಂದು ಬೇಡಿಕೊಂಡರು.
ಬನಶಂಕರಿ ದೇವಾಲಯದಲ್ಲಿ ಆಡಳಿತ ಮಂಡಳಿ ಮತ್ತು ವ್ಯವಸ್ಥಾಪನ ಸಮಿತಿ ವತಿಯಿಂದಲೂ ದೇವಿಗೆ ವಿಶೇಷ ಅಲಂಕಾರ ಹಾಗೂ ಪೂಜೆ ನಡೆಯಿತು. ಬನಶಂಕರಿ ದೇವಿಯ ಎದುರು ಚಂದ್ರಯಾನ-3ರ ರಾಕೆಟ್ ಮಾಡೆಲ್ ಹಾಗೂ ಪ್ರಭಾವಳಿ ಹಿಂದೆ ರಾಷ್ಟ್ರಧ್ವಜವನ್ನಿಟ್ಟು ಪೂಜೆ ಮಾಡಲಾಯಿತು. ಈ ವೇಳೆ ಇಸ್ರೋ ವಿಜ್ಞಾನಿಗಳ ಶ್ರಮಕ್ಕೆ ಲ ಸಿಗಲೆಂದು ಸಮಿತಿ ಅಧ್ಯಕ್ಷ ಎ.ಎಚ್.ಬಸವರಾಜು ಹಾಗೂ ಪ್ರಧಾನ ಅರ್ಚಕ ಚಂದ್ರಮೋಹನ್, ದೇವಾಲಯದ ಸಿಬ್ಬಂದಿ ಹಾಗೂ ಭಕ್ತರು ಪ್ರಾರ್ಥಿಸಿದರು.