ದೇವಸ್ಥಾನಗಳಿಂದ ಮನಸಿಗೆ ಶಾಂತಿ, ನೆಮ್ಮದಿ

151
Published on

ಚನ್ನಗಿರಿ: ದೇವಸ್ಥಾನಗಳು ಮನಸ್ಸಿಗೆ ನೆಮ್ಮದಿ, ಶಾಂತಿಯನ್ನು ನೀಡುವ ಆಲಯಗಳು. ನಿತ್ಯ ಮನೆಯಿಂದ ಹೊರಹೋಗುವ ವೇಳೆ ದೇವರ ದರ್ಶನ ಪಡೆದರೆ ಕೆಲಸಗಳು ನಿರ್ವಿಘ್ನವಾಗಿ ನೆರವೇರುತ್ತವೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಎ.ಜಿ. ಪ್ರವೀಣ್ ತಿಳಿಸಿದರು.

ತಾಲೂಕಿನ ಕಂಚಿಗನಾಳು ಗ್ರಾಮದಲ್ಲಿ ಹೊಸದಾಗಿ ನಿರ್ಮಾಣವಾಗುತ್ತಿರುವ ಗಣಪತಿ ದೇವಸ್ಥಾನ ಜೀರ್ಣೋದ್ಧಾರಕ್ಕಾಗಿ ದೇವಸ್ಥಾನದ ಸಮಿತಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ 50 ಸಾವಿರ ರೂ. ಚೆಕ್ ವಿತರಿಸಿ ಶನಿವಾರ ಮಾತನಾಡಿದರು.

ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಮಾರ್ಗದರ್ಶನದಲ್ಲಿ ರಾಜ್ಯದಲ್ಲಿ ದೇವಸ್ಥಾನ ನಿರ್ಮಾಣಕ್ಕೆ ಸಹಾಯಧನ ನೀಡಲಾಗುತ್ತಿದೆ. ಹಿಂದಿನ ಕಾಲದಲ್ಲಿ ಕಷ್ಟಪಟ್ಟು ಕಟ್ಟಿಸಿದ ದೇವಾಲಯಗಳು ಬೀಳುವ ಹಂತ ತಲುಪಿರುತ್ತದೆ. ಗ್ರಾಮಸ್ಥರು ಅವುಗಳ ದುರಸ್ತಿಗೆ ಮುಂದಾದರೆ ಧರ್ಮಸ್ಥಳ ಸಂಸ್ಥೆ ಕೈಜೋಡಿಸುತ್ತದೆ ಎಂದರು.

ದೇವಾಲಯ ನಿರ್ಮಾಣ ಸುಲಭ. ಆದರೆ, ನಿರ್ವಹಣೆ ಕಷ್ಟದ ಕೆಲಸ. ನಿರ್ಮಾಣವಾದ ಮೇಲೆ ಪ್ರತಿನಿತ್ಯ ಪೂಜಾ ವಿಧಿವಿಧಾನ ನಡೆಸುವುದು ಹಾಗೂ ಸ್ವಚ್ಛತೆ ಕಾಪಾಡಿಕೊಂಡು ಹೋಗಬೇಕು ಎಂದು ವಿವರಿಸಿದರು.

ಗ್ರಾಪಂ ಅಧ್ಯಕ್ಷೆ ದೇವಮ್ಮ, ದೇವಸ್ಥಾನ ಸಮಿತಿ ಅಧ್ಯಕ್ಷ ಸತೀಶ್, ಗ್ರಾಪಂ ಮಾಜಿ ಅಧ್ಯಕ್ಷ ತಿಪ್ಪೇಶಪ್ಪ, ವಲಯ ಮೇಲ್ವಿಚಾರಕಿ ಮಮತಾ, ಗ್ರಾಮದ ಮುಖಂಡರಾದ ರವಿ, ಶೇಖರಪ್ಪ, ಗಣೇಶನಾಯ್ಕ, ಸುಶೀಲಮ್ಮ, ಸುಮಾ, ಸೇವಾ ಪ್ರತಿನಿಧಿ ರವಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net