

ಹೊನ್ನಾಳಿ: ಹೊನ್ನಾಳಿ ತಾಲೂಕಿನಾದ್ಯಂತ ಶ್ರಾವಣ ಮಾಸದ ಮೊದಲನೇ ಶನಿವಾರ ಎಲ್ಲ ದೇವಸ್ಥಾನಗಳಲ್ಲಿ ದೇವರಿಗೆ ವಿಶೇಷ ಪೂಜೆ ನಡೆಯಿತು.
ಭಕ್ತರು ಕುಂದೂರಿನ ಆಂಜನೇಯ ದೇವಸ್ಥಾನ, ಗೊಲ್ಲರಹಳ್ಳಿಯ ಶನೈಶ್ಚರ ದೇವಾಲಯ, ಮಾರಿಕೊಪ್ಪದ ಹಳದಮ್ಮ, ದಿಡಗೂರಿನ ಆಂಜನೇಯ ದೇವರಿಗೆ ವಿಶೇಷ ಪೂಜೆ ನಡೆಯಿತು.
ಹೊನ್ನಾಳಿ ದಿಡ್ಡಿ ಆಂಜನೇಯಸ್ವಾಮಿ ಹಾಗೂ ವೆಂಕಟೇಶ್ವರಸ್ವಾಮಿ, ಸೊರಟೂರಿನ ಆಂಜನೇಯ ಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆದರು.
ಬಲಮುರಿ, ಕತ್ತಿಗೆ ಗ್ರಾಮದಲ್ಲೂ ಭಕ್ತರು ಸಾಲಾಗಿ ನಿಂತು ಆಂಜನೇಯಸ್ವಾಮಿ ದರ್ಶನ ಪಡೆದರು. ಹೊನ್ನಾಳಿ ತಾಲೂಕಿನಾ ಕುಂದೂರಿನ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.
ಜತೆಗೆ, ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು. ದೇವಸ್ಥಾನದಲ್ಲಿ ಭಕ್ತರಿಗೆ ಅರ್ಚಕರು ಆಂಜನೇಯ ಮುದ್ರೆ ಹಾಕಿದರು.