ರಥೋತ್ಸವ ವೇಳೆ ರಸ್ತೆ ಪಕ್ಕದ ಮೋರಿಯಲ್ಲಿ ಚಕ್ರ ಸಿಲುಕಿ ನಿಂತ ಮಹಾರಥ

Chariot
Published on

ಬಳ್ಳಾರಿ: ರಥೋತ್ಸವ ಸಂದರ್ಭದಲ್ಲಿ ರಸ್ತೆ ಪಕ್ಕದ ಮೋರಿಯಲ್ಲಿ ಚಕ್ರ ಸಿಲುಕಿ ಮಹಾರಥ ಸಿಲುಕಿಕೊಂಡ ಪ್ರಕರಣವೊಂದು ನಡೆದಿದೆ. ಬಳ್ಳಾರಿಯ ಎತ್ತಿನಬೂದಿಹಾಳ್ ಗ್ರಾಮದಲ್ಲಿ ಈ ಘಟನೆ ಸಂಭವಿಸಿದೆ.

ಇಂದು ಸಂಜೆ ಇಲ್ಲಿ ಕಟ್ಟೆಬಸಪ್ಪ ಮಹಾರಥೋತ್ಸವ ಸಂದರ್ಭದಲ್ಲಿ ಪಾದಗಟ್ಟೆಯಿಂದ ಮರಳಿ ಬರುವಾಗ ರಸ್ತೆ ಪಕ್ಕದ ಮೋರಿಯಲ್ಲಿ ರಥದ ಚಕ್ರ ಸಿಲುಕಿಕೊಂಡಿತು. ಭಾರಿ ಕಲ್ಲಿನ ಹಾಗೂ ಬ್ರೇಕ್ ಸಿಸ್ಟಮ್ ಹೊಂದಿರುವ ಈ ರಥ ಹೀಗೆ ಸಿಲುಕಿಕೊಂಡಿತ್ತು ಕೆಲಕಾಲ ಆತಂಕ ಉಂಟುಮಾಡಿತ್ತು.

ಜೆಸಿಬಿ ಕ್ರೇನ್ ಬಳಸಿ ರಥವನ್ನು ಮೇಲೆತ್ತುವ ಕಾರ್ಯ ಗ್ರಾಮಸ್ಥರಿಂದ ನಡೆಯುತ್ತಿದೆ. ಈ ಅವಘಡದಿಂದಾಗಿ ರಥೋತ್ಸವ ಸಂಪನ್ನವಾಗದ ಹಿನ್ನೆಲೆಯಲ್ಲಿ ಗ್ರಾಮಸ್ಥರಲ್ಲಿ ದುಗುಡ ಉಂಟಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net