‘ತಾಪವಾನ ನಿಯಂತ್ರಕ’ ಸಾಧನ ಅನಾವರಣ

blm (1)
Published on

ಕಾರ್ಕಳ: ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ವಿಭಾಗ (ಇಇಇ)ದಿಂದ ಟೆಂಪರೇಚರ್ ಕಂಟ್ರೋಲರ್ (ತಾಪಮಾನ ನಿಯಂತ್ರಕ) ಎಂಬ ನವೀನ ಕೈಗಾರಿಕಾ ಉತ್ಪನ್ನ ಬಿಡುಗಡೆಗೊಳಿಸಿತು.

ಎನರ್ಜಿ ಕಂಬಷನ್ ಸಿಸ್ಟಮ್‌ನಲ್ಲಿ ಶುದ್ಧ ಮತ್ತು ಪರಿಣಾಮಕಾರಿ ಶಕ್ತಿಯ ಬಳಕೆಗಾಗಿ ಎಂಡ್ ಟು ಎಂಡ್ ಪರಿಹಾರ ನೀಡುವ ಪ್ರವರ್ತಕ ಕಂಪನಿಯಾದ ಗ್ಯಾಸೋಲ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ತಯಾರಿಸಿದ ನೀರಿನ ಸ್ನಾನದ ಅನಿಲ ಆವಿಕಾರಕ ಯುನಿಟ್‌ಗಳನ್ನು ಸ್ವಯಂಚಾಲಿತಗೊಳಿಸಲು ಈ ಉತ್ಪನ್ನವನ್ನು ವಿನ್ಯಾಸಗೊಳಿಸಲಾಗಿದೆ.

ಇಇಇ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ.ಸೂರ್ಯನಾರಾಯಣ ಕೆ., ಉತ್ಪನ್ನದ ಬಗ್ಗೆ ಮಾಹಿತಿ ನೀಡಿದರು. ವಿನ್ಯಾಸ ಮತ್ತು ಅಭಿವೃದ್ಧಿ ಹಂತದಲ್ಲಿ ಎದುರಿಸಿದ ತಾಂತ್ರಿಕ ಸವಾಲುಗಳು ಮತ್ತು ತಂಡವು ಅವುಗಳನ್ನು ಹೇಗೆ ಯಶಸ್ವಿಯಾಗಿ ನಿಭಾಯಿಸಿತು ಎಂಬುದರ ಬಗ್ಗೆ ತಿಳಿಸಿದರು.

ಗ್ಯಾಸೋಲ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಅಭಿಜಿತ್ ಅವರು ನಿಟ್ಟೆ ಸಂಸ್ಥೆಯ ಈ ನೂತನ ಸಂಶೋಧನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಸ್ವಾತಿ ಹತ್ವಾರ್ ಎಚ್., ಅನೂಪ್ ಶೆಟ್ಟಿ ಮತ್ತು ರವಿಕಿರಣ್ ರಾವ್ ಎಂ. ಅವರನ್ನೊಳಗೊಂಡ ಬೋಧಕ ತಂಡ ಹಾಗೂ ವಿದ್ಯಾರ್ಥಿಗಳಾದ ಜಾಯ್ಸನ್ ಡಿಮೆಲ್ಲೊ, ಸುಚೇತ್ ಆಚಾರ್ಯ, ವಿನಯ್ ಮೇಸ್ತ ಮತ್ತು ಭೂಮಿಕಾ ಈ ಸಾಧನವನ್ನು ಅಭಿವೃದ್ಧಿಪಡಿಸಿದ್ದಾರೆ.

ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ತಾಂತ್ರಿಕ ಶಿಕ್ಷಣ ವಿಭಾಗದ ಉಪಾಧ್ಯಕ್ಷ ಡಾ.ಗೋಪಾಲ್ ಮುಗೇರಾಯ, ನಿಟ್ಟೆ ತಾಂತ್ರಿಕ ಕಾಲೇಜಿನ ಪ್ರಾಂಶುಪಾಲ ಡಾ.ನಿರಂಜನ್ ಎನ್.ಚಿಪ್ಳೂಣ್ಕರ್, ಉಪಪ್ರಾಂಶುಪಾಲ ಡಾ.ನಾಗೇಶ್ ಪ್ರಭು, ಶಿಕ್ಷಣ ವಿಭಾಗದ ಡೀನ್ ಡಾ.ಐ.ರಮೇಶ್ ಮಿತ್ತಂತಾಯ, ಪರೀಕ್ಷಾ ನಿಯಂತ್ರಕ ಡಾ.ಶ್ರೀನಿವಾಸ ರಾವ್ ಬಿ.ಆರ್., ಗ್ಯಾಸ್ಸೋಲ್ ಸೊಲ್ಯೂಷನ್ಸ್ ತಂಡದ ಸದಸ್ಯರು, ಬೋಧಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net