

ಕುಂದಾಪುರ: ಜೀವನದಲ್ಲಿ ಶಿಸ್ತು ಅತೀ ಮುಖ್ಯ, ಪ್ರೀತಿಯಿಂದ ದ್ವೇಷ ದೂರ ವಾಡಬೇಕು. ಶಾಂತಿ ಸಹನೆಯಿಂದ ಎಲ್ಲರೂ ಬಾಳಬೇಕು. ಪ್ರತಿಯೊಬ್ಬರೂ ನಿಮ್ಮ ಕರ್ತವ್ಯವನ್ನು ಸರಿಯಾಗಿ ನಿಭಾಯಿಸಿ ಎಂದು ಕುಂದಾಪುರದ ರೋಜರಿ ವಾತಾ ಚರ್ಚಿನ ಧರ್ಮಗುರು ಪಾವ್ಲ್ ರೆಗೋ ಹೇಳಿದರು.
ಕುಂದಾಪುರ ಸಂತ ಮೇರಿಸ್ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ನಡೆದ ವಿದ್ಯಾರ್ಥಿ ಸಂಸತ್ತು ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಉಡುಪಿ ವಕೀಲ ರಾಯನ್ ರ್ನಾಂಡಿಸ್ ಶುಭ ಹಾರೈಸಿದರು. ಕಾಲೇಜು ಪ್ರಾಂಶುಪಾಲೆ ರೇಷ್ಮಾ ರ್ನಾಂಡಿಸ್, ವಿದ್ಯಾರ್ಥಿ ನಾಯಕ ಶಾನಿತ್ ವಾಸ್, ಸಂಸತ್ತಿನ ಕಾರ್ಯದರ್ಶಿ ಹಾಗೂ ಸಂಸತ್ತಿನ ಬೇರೆ ಬೇರೆ ವಿದ್ಯಾರ್ಥಿ ಮಂತ್ರಿಗಳು ಉಪಸ್ಥಿತರಿದ್ದರು.
ಉಪನ್ಯಾಸಕಿ ಪ್ರಫುಲ್ಲಾ ಸ್ವಾಗತಿಸಿ, ವಿದ್ಯಾರ್ಥಿ ಸಂಸತ್ತಿನ ಕಾರ್ಯದರ್ಶಿ ರೇಚಲ್ ವಂದಿಸಿದರು. ವಿದ್ಯಾರ್ಥಿ ತಬ್ಶಿರ ನಿರೂಪಿಸಿದರು.