ಕಡಬ: ಕಡಬ ತಾಲೂಕಿನ ಬಂಟ್ರ ಗ್ರಾಮದ ಮರ್ಧಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷರೋರ್ವರನ್ನು ಯೂಟ್ಯೂಬ್ ವಾಹಿನಿಯೊಂದು ಅವವಾನಿಸಿದ್ದಕ್ಕೆ ಶಾಲಾಭಿವೃದ್ಧಿ ಸಮಿತಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸಂತೋಷ್ ಕೇನ್ಯ ಸುದ್ದಿಗೋಷ್ಠಿಯಲ್ಲಿ ವಾತನಾಡಿ, ಶತವಾನ ದಾಟಿದ ಶಾಲೆಯಲ್ಲಿ ಹಲವು ವರ್ಷಗಳಿಂದ ದುಡಿಯುತ್ತಿರುವ ಶಿಕ್ಷಕ ರಾಮಕೃಷ್ಣ ಮಲ್ಲಾರ ಶಾಲೆಯ ಸರ್ವಾಂಗೀಣ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದವರು. ಆದರೂ ಅವರ ಬಗ್ಗೆ ಮೋಹಿದೀನ್ ಕುಟ್ಟಿ ಹಾಗೂ ಸಾಜಸ್ ಎಂಬುವರು ಸತ್ಯಕ್ಕೆ ದೂರವಾದ ವಿಚಾರಗಳನ್ನು ಯೂಟ್ಯೂಬ್ ಚಾನೆಲ್‌ಗೆ ಹೇಳಿಕೆ ನೀಡಿ ತೇಜೋವಧೆ ವಾಡಿದ್ದಲ್ಲದೆ, ಶಾಲೆಯ ಘನತೆಗೆ ಕುಂದುಂಟು ವಾಡಿದ್ದಾರೆ ಎಂದು ಆರೋಪಿಸಿದರು.
ಶಿಕ್ಷಕರು ತಮ್ಮ ಕರ್ತವ್ಯದ ಅವಧಿಯಲ್ಲಿ ಶೈಕ್ಷಣಿಕ ಹಾಗೂ ಶಾಲಾ ಚಟುವಟಿಕೆಗಳಿಗೆ ಹೊರಗೆ ಹೋಗುವ ಸಂದರ್ಭಗಳಲ್ಲಿ ಮುಖ್ಯಶಿಕ್ಷಕರ ಅನುಮತಿಯನ್ನು ಪಡೆದು ಪ್ರತಿಭಾ ಕಾರಂಜಿ, ಕ್ರೀಡಾಕೂಟ, ಸೇವಾದಳ ಆರೋಗ್ಯ ಇಲಾಖೆಯ ತರಬೇತಿಗಳಿಗೆ ಮೇಲಧಿಕಾರಿಗಳ ಕಚೇರಿಗಳಿಗೆ ಇನ್ನಿತರ ಶೈಕ್ಷಣಿಕ ಚಟುವಟಿಕೆಗಳಲ್ಲಿ ಭಾಗವಹಿಸಲು, ಚಲನವಲನ ಪುಸ್ತಕದಲ್ಲಿ ದಾಖಲಿಸಿ ಹೊರ ಹೋಗುತ್ತಾರೆ. ಈ ದಾಖಲೆಯನ್ನು ಪಡಕೊಂಡು ಶಾಲಾ ಅವಧಿಯಲ್ಲಿ ಸಂದ ಚಟುವಟಿಕೆಗಳಲ್ಲಿ ಭಾಗವಹಿಸುತ್ತಾರೆ ಎಂದು ಆರೋಪ ವಾಡಿರುವುದು ಸರಿಯಲ್ಲ. ಇಂತಹ ಅಪಪ್ರಚಾರಗಳನ್ನು ಶಾಲಾಭಿವೃದ್ಧಿ ಸಮಿತಿ ಸಹಿಸುವುದಿಲ್ಲ ಎಂದು ಸಂತೋಷ್ ಎಚ್ಚರಿಸಿದರು.
ಉದ್ಯಮಿಗಳಾದ ಶಿವಪ್ರಸಾದ್ ಕೈಕುರೆ, ಬಾಲಕೃಷ್ಣ ಗೌಡ, ಪೋಷಕರಾದ ಸುರೇಶ್ ಅಂತಿಬೆಟ್ಟು, ವಾಡ್ಯಪ್ಪ ಕೋಲಂತಾಡಿ, ಸತೀಶ್ ಆಜನ ಉಪಸ್ಥಿತರಿದ್ದರು.