ಅ.20ರಂದು ಯುವವಾಹಿನಿ ಕೇಂದ್ರ ಸಮಿತಿಯಿಂದ ಮನೆ ಹಸ್ತಾಂತರ

326228657_731322234963861_1319784505874702167_n
Published on


ಮಂಗಳೂರು : ಯುವವಾಹಿನಿ ಕೇಂದ್ರ ಸಮಿತಿ ವತಿಯಿಂದ ನಿರ್ಮಿಸಲಾದ ನೂತನ ಮನೆಯ ಹಸ್ತಾಂತರ ಕಾರ್ಯಕ್ರಮ ಅ.20ರಂದು ಬೆಳಗ್ಗೆ 9.15ಕ್ಕೆ ಬೊಂಡಂತಿಲ ಗ್ರಾಮದ ತಾರಿಗುಡ್ಡೆಯಲ್ಲಿ ನಡೆಯಲಿದೆ.
ತಾರಿಗುಡ್ಡೆಯ ಬೇಬಿ ಪೂಜಾರಿ ಅವರಿಗೆ ನೂತನ ಮನೆ ಹಸ್ತಾಂತರ ಮಾಡಲಾಗುವುದು. ಉದ್ಯಮಿ ದಯಾನಂದ ಬಂಗೇರ
ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಯುವವಾಹಿನಿ ಕೇಂದ್ರ ಸಮಿತಿಯ ಸಲಹೆಗಾರರಾದ ಟಿ.ಎನ್. ಪೂಜಾರಿ ಮತ್ತು ಡಾ.ಎನ್.ಟಿ.ಅಂಚನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಹರೀಶ್ ಕೆ. ಪೂಜಾರಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಇದೇ ಸಂದರ್ಭ ಬೆಳಗ್ಗೆ 10ಕ್ಕೆ ಯುವ ವಾಹಿನಿಯ 35ನೇ ಘಟಕವಾದ ಯುವವಾಹಿನಿ ಪೆರ್ಮಂಕಿ ಘಟಕದ ಉದ್ಘಾಟನೆ ಕೊಂಬೆಲ್ ವಿಶಾಲ್ ಗಾರ್ಡನ್‌ನಲ್ಲಿ ನಡೆಯಲಿದೆ. ಉದ್ಯಮಿ ಶೈಲೇಂದ್ರ ವೈ. ಸುವರ್ಣ, ಧಾರ್ಮಿಕ ಪರಿಷತ್ ಮಾಜಿ ಸದಸ್ಯ ಪದ್ಮನಾಭ ಕೋಟ್ಯಾನ್, ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಉಪಾಧ್ಯಕ್ಷ ರವಿ ಪೂಜಾರಿ ಚಿಲಿಂಬಿ, ಮಲ್ಲೂರು ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದ ಅಧ್ಯಕ್ಷ ರಾಜಾರಾಮ ಕೋಟ್ಯಾನ್, ಪೆರ್ಮಂಕಿ ಬ್ರಹ್ಮಶ್ರೀ ನಾರಾಯಣಗುರು ಸೇವಾ ಭಜನಾ ಮಂದಿರದ ಅಧ್ಯಕ್ಷ ಪ್ರವೀಣ್ ಅಂಚನ್ , ಸತ್ತಿಕಲ್ಲು ಗುರುನಗರದ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದ ಅಧ್ಯಕ್ಷ ದೀಕ್ಷಿತ್ ಪೂಜಾರಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.
ಯುವವಾಹಿನಿಯ ನಿರ್ದೇಶಕ ಪತ್ರಿಕಾಗೋಷ್ಠಿಯಲ್ಲಿ ಜಯರಾಮ್ ಪೂಜಾರಿ, ಸಂಘಟನಾ ಕಾರ್ಯದರ್ಶಿಪ್ರಸಾದ್ ಪಾಲನ್, ದಿನೇಶ್ ಕುಮಾರ್, ಕೀರ್ತಿರಾಜ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net