

ಕಂಪ್ಲಿ: ಈಶಾನ್ಯ ಪದವೀಧರರು ಕ್ಷೇತ್ರದ ಮತದಾರ ಪಟ್ಟಿಗೆ ಹೆಸರು ನೋಂದಾಯಿಸಿಕೊಳ್ಳಲು ಜಾಗೃತಿವಹಿಸಬೇಕು ಎಂದು ತಹಸೀಲ್ದಾರ್ ಶಿವರಾಜ ತಿಳಿಸಿದರು .
ಈಗಾಗಲೇ 864 ಅರ್ಜಿಗಳನ್ನು ಪದವೀಧರರಿಂದ ಸ್ವೀಕರಿಸಲಾಗಿದೆ. ನ.6 ನೋಂದಾಯಿಸಿಕೊಳ್ಳಲು ಅವಕಾಶ ನೀಡಲಾಗಿದೆ. 2020ರ ನ.1ಕ್ಕಿಂತ ಮೊದಲು ಪದವಿ ಗಳಿಸಿರುವ ಪದವೀಧರರು ನಮೂನೆ-18ನ್ನು ಭರ್ತಿ ಮಾಡಬೇಕು. ಅರ್ಜಿಯೊಂದಿಗೆ ಪದವಿ ಅಂತಿಮವರ್ಷದ ಅಂಕಪಟ್ಟಿ ಅಥವಾ ಕಾನ್ವಕೇಷನ್ ಪ್ರಮಾಣಪತ್ರ ಅಥವಾ ಪಾಸಿಂಗ್ ಪ್ರಮಾಣಪತ್ರ, ಆಧಾರ್ ಕಾರ್ಡ್ ಅಥವಾ ಚುನಾವಣೆ ಗುರುತಿನ ಚೀಟಿ ಅಥವಾ ಪಡಿತರ ಚೀಟಿ ಜೆರಾಕ್ಸ್ ಪ್ರತಿಗಳನ್ನು ಸ್ವಯಂ ದೃಢೀಕರಿಸಬೇಕು. ಹಾಗೂ ಪತ್ರಾಂಕಿತ ಅಧಿಕಾರಿಯಿಂದ ದೃಢೀಕರಿಸಿ ಸಲ್ಲಿಸಬೇಕಿದೆ. ನ.23 ರಂದು ಕರಡು ಮತದಾರರ ಪಟ್ಟಿ ಪ್ರಕಟಿಸಲಾಗುವುದು. ಡಿ.30ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುವುದು ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.