More

    ಗಾಯದ ಸಮಸ್ಯೆ: ವಿಶ್ವಕಪ್​ ಟೂರ್ನಿಯಿಂದಲೇ ಹಾರ್ದಿಕ್​ ಔಟ್​! ಕನ್ನಡಿಗ ಪ್ರಸಿದ್ಧ ಕೃಷ್ಣಗೆ ಒಲಿದ ಅವಕಾಶ

    ನವದೆಹಲಿ: ತವರಿನಲ್ಲಿ ನಡೆಯುತ್ತಿರುವ ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ ಇದುವರೆಗೂ ಆಡಿದ ಏಳೂ ಪಂದ್ಯಗಳಲ್ಲಿ ಅಮೋಘ ಗೆಲುವು ಸಾಧಿಸಿ, ಅಜೇಯ ಓಟದೊಂದಿಗೆ ಸೆಮಿಫೈನಲ್​ ತಲುಪಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ರೋಹಿತ್​ ಶರ್ಮ ನೇತೃತ್ವದ ಭಾರತಕ್ಕೆ ಇದೀಗ ಆಘಾತವೊಂದು ಎದುರಾಗಿದೆ. ಪಾದದ ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಆಲ್​ರೌಂಡರ್​ ಆಟಗಾರ ಹಾರ್ದಿಕ್ ಪಾಂಡ್ಯ​ ಇದೀಗ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ.

    ಗಾಯದಿಂದ ಇನ್ನೂ ಚೇತರಿಸಿಕೊಳ್ಳದ ಹಿನ್ನೆಲೆಯಲ್ಲಿ ಹಾರ್ದಿಕ್​ ಪಾಂಡ್ಯರಿಗೆ ಸಂಪೂರ್ಣ ವಿಶ್ರಾಂತಿ ನೀಡಲಾಗಿದೆ. ಅ.19 ರಂದು ಪುಣೆಯಲ್ಲಿ ಬಾಂಗ್ಲಾ ತಮ್ಮ ಮೊದಲ ಓವರ್​ ಎಸೆಯುವಾಗ ಪಾಂಡ್ಯ ಜಾರಿ ಬಿದ್ದು ಪಾದಕ್ಕೆ ಗಾಯ ಮಾಡಿಕೊಂಡಿದ್ದರು. ಇದೇ ಸಂದರ್ಭದಲ್ಲಿ ಮಂಡಿ ಉಳುಕಿತ್ತು. ಈ ವೇಳೆ ಸ್ಥಳದಲ್ಲೇ ಚಿಕಿತ್ಸೆ ನೀಡಲಾಗಿತ್ತು. ಮತ್ತೆ ಎದ್ದು ನಿಂತ ಪಾಂಡ್ಯಗೆ ಮತ್ತೆ ಬೌಲಿಂಗ್​ ಮುಂದುವರಿಸಲು ಸಾಧ್ಯವಾಗಲಿಲ್ಲ. ಬಳಿಕ ಉಳಿದಿದ್ದ ಮೂರೂ ಎಸೆತಗಳನ್ನು ವಿರಾಟ್​ ಕೊಹ್ಲಿ ಎಸೆದಿದ್ದರು. ಗಾಯದ ಸಮಸ್ಯೆಯಿಂದಾಗಿ ಅ.22 ರಂದು ಧರ್ಮಶಾಲಾದಲ್ಲಿ ನ್ಯೂಜಿಲೆಂಡ್ ವಿರುದ್ಧ, ಅ.29ರಂದು ಲಖನೌದಲ್ಲಿ ಇಂಗ್ಲೆಂಡ್​ ಮತ್ತು ನ.2ರಂದು ಮುಂಬೈನಲ್ಲಿ ಶ್ರೀಲಂಕಾ ವಿರುದ್ಧ ನಡೆದ ಪಂದ್ಯಗಳಿಗೆ ಅಲಭ್ಯರಾದರು. ಆದರೆ, ಇನ್ನೂ ಚೇತರಿಸಿಕೊಳ್ಳದ ಹಿನ್ನೆಲೆಯಲ್ಲಿ ಟೂರ್ನಿಯಿಂದಲೇ ಕೈಬಿಡಲಾಗಿದೆ.

    ಮೊಹಮ್ಮದ್​ ಶಮಿಗೆ ಅವಕಾಶ
    ಹಾರ್ದಿಕ್ ಗಾಯಗೊಂಡು ತಂಡದಿಂದ ಹೊರಗುಳಿದ ಬಳಿಕ ಮೊಹಮ್ಮದ್​ ಶಮಿಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ನೀಡಲಾಯಿತು. ಇದನ್ನು ಸರಿಯಾಗಿ ಉಪಯೋಗಿಸಿಕೊಂಡಿರುವ ಶಮಿ, ಕೇವಲ 3 ಪಂದ್ಯಗಳಲ್ಲಿ 4.27 ಎಕನಾಮಿಯಲ್ಲಿ 14 ವಿಕೆಟ್​ಗಳನ್ನು ಮುಂಚಿದರು. ನ್ಯೂಜಿಲೆಂಡ್​ ಮತ್ತು ಶ್ರೀಲಂಕಾ ವಿರುದ್ಧದ ಪಂದ್ಯಗಳಲ್ಲಿ ವೈಯಕ್ತಿಕವಾಗಿ ಐದೈದು ವಿಕೆಟ್​ ಪಡೆದು ಎಲ್ಲರ ಗಮನ ಸೆಳೆದಿದ್ದಾರೆ.

    ಕನ್ನಡಿಗನಿಗೆ ಸ್ಥಾನ
    ಹಾರ್ದಿಕ್​ ಪಾಂಡ್ಯ ಟೂರ್ನಿಯಿಂದಲೇ ಹೊರಗುಳಿದಿದ್ದರಿಂದ ಟೀಮ್​ ಇಂಡಿಯಾ ಸ್ಕ್ವಾಡ್​ಗೆ ಕನ್ನಡಿಗ ಪ್ರಸಿದ್ಧ ಕೃಷ್ಣ ಸೇರಿಕೊಂಡಿದ್ದಾರೆ. ಕೃಷ್ಣ ಅವರು ಬಲಗೈ ವೇಗದ ಬೌಲರ್ ಆಗಿದ್ದು, ವಿಶ್ವಕಪ್​ ಈವೆಂಟ್ ತಾಂತ್ರಿಕ ಸಮಿತಿಯು ನವೆಂಬರ್ 4ರ ಶನಿವಾರದಂದು ಕೃಷ್ಣರನ್ನು ಅನುಮೋದಿಸಿದೆ. ನವೆಂಬರ್ 5ರಂದು ಭಾನುವಾರ ಕೋಲ್ಕತ್ತದ ಈಡನ್ ಗಾರ್ಡನ್ಸ್‌ನಲ್ಲಿ ನಡೆಯಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯಕ್ಕೆ ಕೃಷ್ಣ ಲಭ್ಯವಿರಲಿದ್ದಾರೆ.

    ಪ್ರಸಿದ್ಧ ಕೃಷ್ಣ ಇತ್ತೀಚೆಗೆ ಸೈಯದ್ ಮುಷ್ತಾಕ್ ಅಲಿ T20 ಟ್ರೋಫಿಯಲ್ಲಿ ಕರ್ನಾಟಕದ ಪರವಾಗಿ ಆಡಿದರು. ಈ ಟೂರ್ನಿಯಲ್ಲಿ ಗಮನಾರ್ಹ ಪ್ರದರ್ಶನ ನೀಡಿರುವ ಕೃಷ್ಣ, ಅನೇಕ ಪಂದ್ಯಗಳಲ್ಲಿ ಐದು ವಿಕೆಟ್​ಳನ್ನು ಪಡೆದಿದ್ದಾರೆ. ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಸಿರಾಜ್​ರಂಥ ಸ್ಟಾರ್​ ಬೌಲರ್​ಗಳು ಈಗಾಗಲೇ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವುದರಿಂದ, ಯಾವುದೇ ಅನಿರೀಕ್ಷಿತ ಸಂದರ್ಭಗಳನ್ನು ಹೊರತುಪಡಿಸಿ ಕೃಷ್ಣ ಅವರಿಗೆ ತಕ್ಷಣವೇ ಅವಕಾಶ ಸಿಗುವ ಸಾಧ್ಯತೆಯಿಲ್ಲ.

    ಇಲ್ಲಿಯವರೆಗೆ 17 ಏಕದಿನ ಪಂದ್ಯಗಳನ್ನು ಆಡಿರುವ ಕೃಷ್ಣ, 5.60ರ ಎಕಾನಮಿ ದರದಲ್ಲಿ 29 ವಿಕೆಟ್‌ಗಳನ್ನು ಪಡೆದಿದ್ದಾರೆ. ಇದರಲ್ಲಿ ಎರಡು ನಾಲ್ಕು ವಿಕೆಟ್‌ಗಳ ಸಾಧನೆ ಮಾಡಿದ್ದಾರೆ. 2023ರ ಸೆಪ್ಟೆಂಬರ್ 27ರಂದು ರಾಜ್‌ಕೋಟ್‌ನ SCA ಸ್ಟೇಡಿಯಂನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಮುಖಾಮುಖಿಯಾದಾಗ ಅವರು ಕೊನೆಯದಾಗಿ ಏಕದಿನ ಪಂದ್ಯವನ್ನು ಆಡಿದರು. (ಏಜೆನ್ಸೀಸ್​)

    ಬೌಲರ್​ಗಳ ಮಿಂಚಿನ ದಾಳಿಗೆ ತತ್ತರಿಸಿದ ಸಿಂಹಳಿಯರು; ಭಾರತಕ್ಕೆ ಶ್ರೀಲಂಕಾ ವಿರುದ್ಧ 302 ರನ್​ಗಳ ಭರ್ಜರಿ ಜಯ

    ಉರ್ಫಿ ಎಡವಟ್ಟು! ನಕಲಿ ಬಂಧನದ ಹೈಡ್ರಾಮ ಮಾಡಲು ಹೋಗಿ ಅಸಲಿ ಬಂಧನ ಭೀತಿ ಶುರುವಾಯ್ತು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts