30 ವಿದ್ಯುನ್ಮಾನ ಮತಯಂತ್ರಗಳಲ್ಲಿ ತಾಂತ್ರಿಕ ದೋಷ; ಎಚ್ಚೆತ್ತ ಅಧಿಕಾರಿಗಳು

Voting machine
Published on

ಚಿತ್ರದುರ್ಗ: ತಾಂತ್ರಿಕ ದೋಷ ಕಾಣಿಸಿಕೊಂಡ ಕಾರಣ ಚಿತ್ರದುರ್ಗ ಜಿಲ್ಲೆಯಲ್ಲಿ 30 ವಿದ್ಯುನ್ಮಾನ ಮತಯಂತ್ರಗಳನ್ನು ಬದಲಾವಣೆ ಮಾಡಲಾಗಿದೆ.

ಮತಯಂತ್ರಗಳಲ್ಲಿ ದೋಷ ಕಾಣಿಸಿಕೊಂಡ ಕಾರಣ ಬದಲಾವಣೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ತಿಳಿಸಿದ್ದಾರೆ.

30 ಯಂತ್ರಗಳಲ್ಲಿ ತಾಂತ್ರಿಕ ದೋಷ

ಅಣಕು ಮತದಾನದ ವೇಳೆ 23 ಹಾಗೂ ವೋಟಿಂಗ್​ ಪ್ರಕ್ರಿಯೆ ಆರಂಭವಾದ ಮೇಲೆ 7 ಯಂತ್ರಗಳಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ.

ಅಣಕು ಮತದಾನದ ವೇಳೆ 4 ಬ್ಐಆಲೆಟ್​ ಯೂನಿಟ್​, 2 ಕಂಟ್ರೋಲ್​ ಯೂನಿಟ್​, 17 ವಿವಿಪ್ಯಾಟ್​ಗಳಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ.

ಮತದಾನ ಪ್ರಕ್ರಿಯೆ ಶುರುವಾದ ಬಳಿಕ 7 ವಿವಿಪ್ಯಾಟ್​ಗಳಲ್ಲಿ ದೋಷ ಕಾಣಿಸಿಕೊಂಡಿದ್ದು ಕಾಲಮಿತಿಯಲ್ಲಿ ಅದನ್ನು ಬದಲಾವಣೆ ಮಾಡಲಾಗಿದೆ ಎಂದು ಜಿಲ್ಲಾ ಚುನಾವಣಾ ಅಧಿಕಾರಿ ದಿವ್ಯ ಫ್ರಭು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net