

ಹೆಬ್ರಿ: ಜೀವನದಲ್ಲಿ ಒಂದಂಶವನ್ನು ಸವಾಜದ ಬಡವರ ಸೇವೆಗಾಗಿ ಟೀಮ್ ಈಶ್ವರ್ ಮಲ್ಪೆ ವಿನಿಯೋಗಿಸುತ್ತಿದ್ದಾರೆ. ಆ ಮೂಲಕ ಶ್ರವಣ ದೋಷವಿರುವ ಚಿಕಿತ್ಸೆಗಾಗಿ ಶಿಬಿರ ಆಯೋಜಿಸುವ ಮೂಲಕ ಜನಸೇವೆ ವಾಡುತ್ತಿದ್ದಾರೆ. ಕಿವಿಯ ಸಮಸ್ಯೆಗಳ ಬಗ್ಗೆ ಒತ್ತು ನೀಡಿ ಚಿಕಿತ್ಸೆ ಕೊಡಿಸುವುದು ಟೀಮ್ ಈಶ್ವರ್ ಮಲ್ಪೆ ಅವರ ಉದ್ದೇಶವಾಗಿದೆ ಎಂದು ಟೀಮ್ ಈಶ್ವರ್ ಮಲ್ಪೆ ಬಳಗದ ಸಂಚಾಲಕ ಲವ ಕುವಾರ್ ಹೇಳಿದರು.
ಹೆಬ್ರಿ ರೋಟರಿ ಸಮುದಾಯದಳದ ರಾಮಕೃಷ್ಣ ಆಚಾರ್ಯ ಮತ್ತು ಕೃಷ್ಣರಾಜ ಆಚಾರ್ಯ ನೇತೃತ್ವದಲ್ಲಿ ಹೆಬ್ರಿ ತಾಲೂಕು ಕಾರ್ಯನಿರತ ಪತ್ರಕರ್ತ ಸಂ ಮತ್ತು ಟೀಮ್ ಈಶ್ವರ್ ಮಲ್ಪೆ ಸಹಯೋಗದಲ್ಲಿ ನಡೆದ ಶ್ರವಣ ತಪಾಸಣೆ ಉಚಿತ ಶಿಬಿರದಲ್ಲಿ ಮಾತನಾಡಿದರು.
ಹೆಬ್ರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ತಾರಾನಾಥ ಬಂಗೇರ ಅಧ್ಯಕ್ಷತೆ ವಹಿಸಿ ವಾತನಾಡಿದರು. ಹೆಬ್ರಿ ರೋಟರಿ ಸಮುದಾಯದಳದ ಗೌರವಾಧ್ಯಕ್ಷ ಎಚ್.ರಾಮಕೃಷ್ಣ ಆಚಾರ್ಯ, ಅಧ್ಯಕ್ಷ ಕೃಷ್ಣರಾಜ ಆಚಾರ್ಯ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾವಾಭಿವೃದ್ಧಿ ಯೋಜನೆಯ ಹೆಬ್ರಿ ತಾಲೂಕು ಯೋಜನಾಧಿಕಾರಿ ಲೀಲಾವತಿ, ಹೆಬ್ರಿ ಗ್ರಾಪಂ ಪಿಡಿಒ ಸದಾಶಿವ ಸೇರ್ವೆಗಾರ್, ಹೆಬ್ರಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂ ಅಧ್ಯಕ್ಷ ಸುಕುವಾರ್ ಮುನಿಯಾಲ್, ತಜ್ಞ ವೈದ್ಯೆ ಡಾ.ಅಂಕಿತಾ ಮುಂತಾದವರು ಉಪಸ್ಥಿತರಿದ್ದರು.
ರಾಮಕೃಷ್ಣ ಆಚಾರ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೃಷ್ಣರಾಜ ಆಚಾರ್ಯ ಸ್ವಾಗತಿಸಿದರು. ಶಿಕ್ಷಕ ಸದಾಶಿವ ಬಾಯರಿ ವಂದಿಸಿದರು. ಪ್ರಕಾಶ ಭಟ್ ನಿರೂಪಿಸಿದರು.