

ವಿಜಯವಾಣಿ ಸುದ್ದಿಜಾಲ ಗಂಗೊಳ್ಳಿ
ಕರಾವಳಿಯಲ್ಲಿ ಮೇ ತಿಂಗಳಿನಲ್ಲಿ ಒಂದೆರೆಡು ಬಾರಿ ಮಳೆಯಾಗಿದ್ದರೂ, ತಾಪವಾನ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಇದು ಎಳನೀರು ಉದ್ಯಮದ ಮೇಲೆ ಪರಿಣಾಮ ಬೀರಿದ್ದು, ಮಾರುಕಟ್ಟೆಗೆ ಪೂರೈಕೆ ಕಡಿಮೆಯಾಗಿದ್ದರಿಂದ ಎಳನೀರಿನ ದರದಲ್ಲೂ ಹೆಚ್ಚಳವಾಗಿದೆ. ಬಿಸಿಲಿನ ಬೇಗೆಯ ಪರಿಣಾಮದಿಂದ ಪಾರಾಗಲು ಜನರು ಎಳನೀರು ಸಹಿತ ತಂಪು ಪಾನೀಯಗಳತ್ತ ಮುಖಮಾಡಿದ್ದು, ಮಾರುಕಟ್ಟೆಯಲ್ಲಿ ಸೀಯಾಳಕ್ಕೆ ಭರ್ಜರಿ ಬೇಡಿಕೆ ಕಂಡುಬಂದಿದೆ. ಆದರ ವಿಪರೀತ ಬಿಸಿಯ ವಾತಾವರಣದಿಂದಾಗಿ ಸೀಯಾಳ ಇಳುವರಿ ಕಡಿಮೆಯಾಗಿದ್ದು, ಮಾರುಕಟ್ಟೆ ಮೇಲೆ ಹೊಡೆತ ಬಿದ್ದಿದೆ. ಊರಿನ ಎಳನೀರು ಇಳುವರಿ ಇಳಿಕೆ ಹಾಗೂ ಮಲೆನಾಡು ಪ್ರದೇಶಗಳಿಂದ ಕರಾವಳಿ ಮಾರುಕಟ್ಟೆಗೆ ಪೂರೈಕೆಯಾಗುತ್ತಿದ್ದ ಎಳನೀರು ಈ ಬಾರಿ ನಿರೀಕ್ಷಿತ ಪ್ರಮಾಣದಲ್ಲಿ ಬರುತ್ತಿಲ್ಲ. ಈ ಎಲ್ಲ ಕಾರಣಗಳಿಂದ ಎಳನೀರಿನ ದರ ಗಗನಮುಖಿಯಾಗಿದೆ.
ಏಪ್ರಿಲ್‌ನಲ್ಲಿ 30 ರೂ.ಗೆ ಸಿಗುತ್ತಿದ್ದ ಸೀಯಾಳ, ಮೇ ವೇಳೆ ಹಠಾತ್ ದರ ಏರಿಕೆಯಾಗಿ 45 ರಿಂದ 50 ರೂ. ಗಳಿಗೆ ವ್ಯಾಪಾರವಾಗುತ್ತಿದೆ. ಎಳನೀರಿಗೆ ದರ ಹೆಚ್ಚಳವಾದ ಕಾರಣ ಸಾರ್ವಜನಿಕರು ತಂಪು ಪಾನಿಗಳತ್ತ ಮುಖಮಾಡಿದ್ದು, ಇನ್ನೂ ಹಲವರು ಹಣ್ಣುಗಳ ಖರೀದಿಯತ್ತ ಆಸಕ್ತಿ ವಹಿಸಿದ್ದಾರೆ. ಕೆಲವೊಂದು ಪ್ರವಾಸಿ ತಾಣಗಳಲ್ಲಿ ಸೀಯಾಳ ದರ 70 ರೂ. ದಾಟಿದೆ.
ಬಿಸಿಲಿನ ತಾಪ ಹೆಚ್ಚು ಇರುವುದರಿಂದ ಜನರು ಎಳನೀರು ಅಂಗಡಿಗಳತ್ತ ಮುಖ ವಾಡಿದ್ದಾರೆ. ಊರಿನ ಎಳನೀರಿಗೆ ಭಾರಿ ಬೇಡಿಕೆ ಇದೆ. ಮಲೆನಾಡು ಪ್ರದೇಶಗಳಿಂದ ಬರುತ್ತಿದ್ದ ಬೊಂಡ ಕೂಡ ಬರುತ್ತಿಲ್ಲ. ಸೀಯಾಳ ಅಭಾವದಿಂದ ಪೂರೈಕೆ ವಾಡಲು ಸಾಧ್ಯವಾಗುತ್ತಿಲ್ಲ. ವಿಪರೀತ ಸೆಖೆ ಇರುವುದರಿಂದ ಸೀಯಾಳಕ್ಕೆ ಬೇಡಿಕೆ ಇನ್ನೂ ಹೆಚ್ಚಳವಾಗಿದೆ. -ವಾಧವ ಖಾರ್ವಿ, ಸೀಯಾಳ ವ್ಯಾಪಾರಸ್ಥ, ಗಂಗೊಳ್ಳಿ. https://www.vijayavani.net/the-survival-of-the-sanskrit-language-is-everyones-duty https://www.vijayavani.net/if-farmers-are-treated-unfairly-the-authorities-are-directly-responsible