ಟೀಮ್ ಬ್ರದರ್ ತಂಡಕ್ಕೆ ಪ್ರಶಸ್ತಿ

29spt1- 1st
Published on

ಸೋಮವಾರಪೇಟೆ: ತಾಲೂಕಿನ ಕುಸುಬೂರು-ಕೆಂಚಮ್ಮನಬಾಣೆಯ ಭಾರತ್ ಮಾತಾ ಸೇವಾ ಸಂಘದ ವತಿಯಿಂದ ಕೆಂಚಮ್ಮನಬಾಣೆಯ ಭಾರತ್ ಮೈದಾನದಲ್ಲಿ ಶನಿವಾರ ನಡೆದ ಪುರುಷರ ಮುಕ್ತ ವಾಲಿಬಾಲ್ ಪಂದ್ಯಾವಳಿಯಲ್ಲಿ ಮೈಸೂರಿನ ಟೀಮ್ ಬ್ರದರ್ ತಂಡ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಮಂಗಳೂರಿನ ಜಿಯಾ ಪ್ರತಾಪ್ ತಂಡ ರನ್ನರ್ ಅಪ್‌ಗೆ ಭಾಜನವಾಯಿತು.


ಕಬಡ್ಡಿ ಪಂದ್ಯದಲ್ಲಿ ಕೆಂಚಮ್ಮನಬಾಣೆ ಟೀಮ್ ಬ್ರದರ್ ಎ ತಂಡ ಪ್ರಥಮ ಹಾಗೂ ಬಿ ತಂಡ ದ್ವಿತೀಯ ಸ್ಥಾನ ಪಡೆಯಿತು. ಮಹಿಳೆಯರ ಥ್ರೋಬಾಲ್‌ನಲ್ಲಿ ಬಲಮುರಿ ಗಣಪತಿ ದೇವಾಲಯ ತಂಡ ಪ್ರಥಮ, ಕೆಂಚಮ್ಮನಬಾಣೆ 7 ಸ್ಟಾರ್ ತಂಡ ದ್ವೀತಿಯ ಸ್ಥಾನ ಗಳಿಸಿತು. ಮಹಿಳೆಯರ ಹಗ್ಗಜಗ್ಗಾಟದಲ್ಲಿ ಟೀಮ್ ಬಲಮುರಿ ತಂಡ ಪ್ರಥಮ ಹಾಗೂ ಕೆಂಚಮ್ಮನಬಾಣೆಯ ಕೆಂಚಮ್ಮ ದೇವಿ ತಂಡ ದ್ವಿತೀಯ ಸ್ಥಾನ ಪಡೆಯಿತು.


ಸೇವಾ ಸಂಘದ ಅಧ್ಯಕ್ಷ ಕೆ.ಜೆ.ಸುನೀಲ್, ಮಾಜಿ ಅಧ್ಯಕ್ಷರಾದ ಬಿ.ಎನ್.ಚಂದ್ರಶೇಖರ್, ಟಿ.ಪಿ.ಮೂರ್ತಿ, ಬೇಳೂರು ಗ್ರಾಮ ಪಂಚಾಯಿತಿ ಸದಸ್ಯರಾದ ಸುದರ್ಶನ್, ಭಾಸ್ಕರ್, ದಾನಿಗಳಾದ ಮುಂಜುನ ಆಶೋಕ್, ಆರ್.ಪುಟ್ಟಣ್ಣ, ಪ್ರಮುಖರಾದ ಚಂದ್ರಿಕಾ ಕುಮಾರ್, ಜಯಲಲಿತಾ ಇದ್ದರು.
29ಎಸ್‌ಪಿಟಿ1- ವಾಲಿಬಾಲ್‌ನಲ್ಲಿ ಪ್ರಥಮ ಸ್ಥಾನ ಪಡೆದ ಟೀಮ್ ಬ್ರದರ್ ತಂಡ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net