

ಸುಳ್ಯ: ಭಾರಿ ಮಳೆ ಪರಿಣಾಮ ಐವರ್ನಾಡು ಗ್ರಾಮದ ದೇರಾಜೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಕಟ್ಟಡದ ಮೇಲ್ಛಾವಣಿ ಶಿಥಿಲಗೊಂಡಿದ್ದು, ಮಳೆ ನೀರು ಒಳಗೆ ಬೀಳುತ್ತಿರುವುದರಿಂದ ವಿದ್ಯಾರ್ಥಿಗಳನ್ನು ಪಂಚಲಿಂಗೇಶ್ವರ ದೇವಸ್ಥಾನದ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ.
ಇಲ್ಲಿನ ಕಟ್ಟಡ ಹಳೆಯದಾಗಿದ್ದು ಪಕ್ಕಾಸುಗಳು ಶಿಥಿಲವಾಗಿವೆ. ಹೆಂಚುಗಳು ಅಲ್ಲಲ್ಲಿ ಒಡೆದು ಹೋಗಿ ಮಳೆ ನೀರು ತರಗತಿಯೊಳಗೆ ಬೀಳುತ್ತಿದೆ. ಇಲ್ಲಿ 5ನೇ ತರಗತಿವರೆಗೆ ಇದ್ದು ಒಟ್ಟು 12 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಶಿಕ್ಷಣ ಇಲಾಖೆ ಅಧಿಕಾರಿಗಳು, ಪಂಚಾಯಿತಿ ಸದಸ್ಯರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.