ಕನ್ನಡ ಭವನದಲ್ಲಿ ಇಂದು ಶಿಕ್ಷಕ ಸಾಹಿತಿಗಳ ಸಮಾವೇಶ

IMG-20230821-WA0027(1)
Published on

ಕಸಾಪ ಶಿಕ್ಷಕರ ಸಂಘ ಸಂಯುಕ್ತವಾಗಿ ಆಯೋಜನೆ | ಸಿಇಒ ಮೀನಾ ಉದ್ಘಾಟನೆ ಎಸ್ಪಿ ಕಿಶೋರಬಾಬು ಭಾಗಿ
ವಿಜಯವಾಣಿ ಸುದ್ದಿಜಾಲ ಕಲಬುರಗಿ
ಸದಾ ಕಲಿಸುವ ಕಾಯಕದಲ್ಲಿ ತಲ್ಲೀನರಾಗಿರುವ ಶಿಕ್ಷಕರಲ್ಲಿರುವ ಪ್ರತಿಭೆಗೆ ಸೂಕ್ತ ವೇದಿಕೆ ಕಲ್ಪಿಸಲು ಸೆ.೨೮ ರಂದು ಬೆಳಗ್ಗೆ ೧೦.೩೦ ಗಂಟೆಗೆ ನಗರದ ಕನ್ನಡ ಭವನದಲ್ಲಿ  ಒಂದು ದಿನದ `ಶಿಕ್ಷಕ ಸಾಹಿತಿಗಳ ಸಮಾವೇಶ'ವನ್ನು ಆಯೋಜಿಸಲಾಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಹಾಗೂ ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಮಹೇಶ ಹೂಗಾರ ತಿಳಿಸಿದರು.
ಸಮಾವೇಶ ಯಶಸ್ವಿಗಾಗಿ ರಚಿಸಿದ ಸ್ವಾಗತ ಸಮಿತಿಗೆ ಅಧ್ಯಕ್ಷರಾಗಿ ಡಾ. ಸುರೇಶ ಸಜ್ಜನ್ ಹಾಗೂ ಕಾರ್ಯಾಧ್ಯಕ್ಷರಾಗಿ ಕಲ್ಯಾಣಕುಮಾರ ಶೀಲವಂತ ಅವರು ನೇಮಕ ಮಾಡಲಾಗಿದೆ. ವೇದಿಕೆಗೆ ಆದರ್ಶ ಶಿಕ್ಷಕಿ ಲಿಂ.ಸಿದ್ದಮ್ಮ ಶಿವಾನಂದ ಮಠಪತಿ ಹೆಸರು ಇಡಲಾಗಿದೆ  ಎಂದು ಸೋಮವಾರ ಜಂಟಿಯಾಗಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
 ಜಿಪಂ  ಸಿಇಒ ಭಂವರ್‌ಸಿAಗ್ ಮೀನಾ ಉದ್ಘಾಟಿಸುವರು. ಪ್ರೋಬೆಷನರಿ ಐಎಎಸ್ ಅಧಿಕಾರಿ ಗಜಾನನ ಬಾಲೆ ಅಧ್ಯಕ್ಷತೆ ವಹಿಸುವರು. ಪೊಲೀಸ್ ತರಬೇತಿ  ಮಹಾವಿದ್ಯಾಲಯ ಪ್ರಾಚಾರ್ಯರಾದ ಡಿ.ಕಿಶೋರಬಾಬು, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ರಾಜು ಲೇಂಗಟಿ  ಇತರರು ಮುಖ್ಯ ಅತಿಥಿಗಳಾಗಿ  ಆಗಮಿಸಲಿದ್ದಾರೆ. ಜಿಲ್ಲೆಯ ಶಿಕ್ಷಕರೇ ರಚಿಸಿದ ಕವನಗಳ ಸಂಗ್ರಹ `ಅರಿವೇ ಗುರು' ಎಂಬ ಪ್ರಾತಿನಿಧಿಕ ಕವನ ಸಂಕಲನವನ್ನು ಬಿಡುಗಡೆ ಮಾಡಲಾಗುವುದು ಎಂದು ತೇಗಲತಿಪ್ಪಿ ವಿವರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net