ಪರಿಶುದ್ಧ ಮನಸ್ಸಿನಿಂದ ನಿಸ್ವಾರ್ಥ ಸೇವೆ

chethana
ಚೇತನಾ ವಿಶೇಷ ಶಾಲೆಯಲ್ಲಿ ಶಿಕ್ಷಕ ದಿನ ಕಾರ್ಯಕ್ರಮವನ್ನು ಪ್ರಕಾಶ್ ಜುವೆಲರ್ಸ್‌ ಕಾರ್ಕಳ ಮಾಲೀಕ ಪ್ರಕಾಶ್ ಆಚಾರ್ಯ ಉದ್ಘಾಟಿಸಿದರು
Published on

ಕಾರ್ಕಳ: ಪರಿಶುದ್ಧ ಮನಸ್ಸಿನಿಂದ ನಿಸ್ವಾರ್ಥ ಸೇವೆ ಮಾಡುವ ನಮ್ಮ ಶಿಕ್ಷಕರನ್ನು ನಾವು ಗೌರವಿಸಿ ಜೀವನಪೂರ್ತಿ ಅವರನ್ನು ಮರೆಯದೆ ದೇವರಂತೆ ಪೂಜಿಸುವುದು ನಮ್ಮ ಕರ್ತವ್ಯ ಎಂದು ಕಾರ್ಕಳ ಮೀರಾ ಕಾಮತ್ ಮೆಮೋರಿಯಲ್ ಫಂಡ್ ಫಾರ್ ಚಿಲ್ಡ್ರನ್ ವಿಥ್ ಸ್ಪೇಷಲ್ ನೀಡ್ ಸ್ಥಾಪಕ ಕಮಲಾಕ್ಷ ಕಾಮತ್ ಹೇಳಿದರು.

ಚೇತನಾ ವಿಶೇಷ ಶಾಲೆ ಶಿಕ್ಷಕ ದಿನ ಆಚರಣೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರಕಾಶ್ ಜುವೆಲರ್ಸ್‌ ಕಾರ್ಕಳ ಮಾಲೀಕ ಪ್ರಕಾಶ್ ಆಚಾರ್ಯ ಕಾರ್ಯಕ್ರಮ ಉದ್ಘಾಟಿಸಿದರು. ನಿವೃತ್ತ ಉಪನ್ಯಾಸಕಿ ಮಾಲತಿ ವಸಂತ್‌ರಾಜ್, ಉಡುಪಿ ಜಿಲ್ಲಾ ಗೈಡ್ಸ್ ಕಮಿಷನರ್ ಜ್ಯೋತಿ ಜೆ.ಪೈ, ಪ್ರತೀಕ್ ಕಾಮತ್, ಭಾರತೀ ಸೇವಾ ಮಂಡಳಿ ಟ್ರಸ್ಟ್‌ನ ಕಾರ್ಯದರ್ಶಿ ರಘುನಾಥ್ ಶೆಟ್ಟಿ, ಕೋಶಾಧಿಕಾರಿ ವಿಜಯ್ ಕುಮಾರ್, ಟ್ರಸ್ಟಿ ಗೀತಾ ಜಿ.ಪೈ ಉಪಸ್ಥಿತರಿದ್ದರು. ಕೋಶಾಧಿಕಾರಿ ವಿಜಯ್ ಕುಮಾರ್ ಸ್ವಾಗತಿಸಿ, ಫಿಸಿಯೋಥೆರಪಿಸ್ಟ್ ಅಮಿತಾ ಕಾರ್ಯಕ್ರಮ ನಿರೂಪಿಸಿದರು. ಮುಖ್ಯ ಶಿಕ್ಷಕಿ ಹೇಮಲತಾ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net