ಶಿಕ್ಷಕರ ದಿನಾಚರಣೆಯಲ್ಲೇ ಅಧಿಕಾರಿಗಳಿಗೆ ಎಂಎಲ್‌ಸಿ ಅಪ್ಪಾಜಿಗೌಡ ಹಿಗ್ಗಾಮುಗ್ಗಾ ತರಾಟೆ

appajigowda
Published on

ಮಂಡ್ಯ: ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಆರಂಭಕ್ಕೆ ವಿಳಂಬ ಮಾಡಿದ ಅಧಿಕಾರಿಗಳನ್ನು ಎಲ್ಲರ ಸಮ್ಮುಖದಲ್ಲೇ ಎಂಎಲ್‌ಸಿ ಅಪ್ಪಾಜಿಗೌಡ ತರಾಟೆಗೆ ತೆಗೆದುಕೊಂಡ ಘಟನೆ ನಾಗಮಂಗಲದ ಅಂಬೇಡ್ಕರ್ ಭವನದಲ್ಲಿ ಶನಿವಾರ ಸಂಭವಿಸಿದೆ.

ಬೆಳಗ್ಗೆ 10.30ಕ್ಕೆ ಕಾರ್ಯಕ್ರಮ ಆರಂಭವಾಗಬೇಕಿತ್ತು. ನಿಗದಿತ ಸಮಯಕ್ಕೆ ಆಗಮಿಸಿ ವೇದಿಕೆ ಮುಂಭಾಗ ವಿಧಾನ ಪರಿಷತ್ ಸದಸ್ಯ ಅಪ್ಪಾಜಿಗೌಡ ಕುಳಿತಿದ್ದರು. ಆದರೆ, 12 ಗಂಟೆಯಾದರೂ ಶಾಸಕ ಸುರೇಶ್​ ಗೌಡ ಬಂದಿರಲಿಲ್ಲ. ಅವರ ಬರುವಿಕೆಗಾಗಿ ಕಾಯುತ್ತ ಕಾರ್ಯಕ್ರಮ ಆರಂಭಿಸಿರಲಿಲ್ಲ. ಸಮಯ ಆಗ್ತಿದೆ ಕಾರ್ಯಕ್ರಮ ಆರಂಭಿಸಿ ಎಂದು ಅಪ್ಪಾಜಿಗೌಡ ಹಲವು ಬಾರಿ ಸೂಚಿಸಿದರೂ ಆಯೋಜಕರು ಮತ್ತು ಅಧಿಕಾರಿಗಳು ಸುಮ್ಮನಿದ್ದರು. ಇದನ್ನೂ ಓದಿರಿ video/ ಬೆಂಕಿಯಲ್ಲಿ ಚಿತ್ರ ಬಿಡಿಸಿ ದಾಖಲೆ ಬರೆದ ಕರ್ನಾಟಕದ ಕುವರ

ನಿಗದಿತ ಅವಧಿ ಮೀರಿದರೂ ಕಾರ್ಯಕ್ರಮ ಆರಂಭಿಸದ ಅಧಿಕಾರಿಗಳನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಅಪ್ಪಾಜಿಗೌಡ, 'ಯಾರೇ ಜನಪ್ರತಿನಿಧಿಯಾಗಿರಲಿ ಅವರಿಗೆ ಬಕೆಟ್ ಹಿಡಿಯೋದು ಬಿಡಿ. ಎಥಿಕ್ಸ್ ಇಟ್ಟುಕೊಂಡು ಕೆಲಸ ಮಾಡಿ. ಕಾರ್ಯಕ್ರಮ ಆರಂಭ ಮಾಡದಿದ್ದರೆ ಹೊರಹೋಗುತ್ತೇನೆ' ಎಂದು ಏರುಧ್ವನಿಯಲ್ಲಿ ಎಚ್ಚರಿಸಿದರು. ಎಂಎಲ್​ಸಿ ಆಕ್ರೋಶಕ್ಕೆ ತಬ್ಬಿಬ್ಬಾದ ತಹಸೀಲ್ದಾರ್, ಬಿಇಒ, ತಾಪಂ ಇಒ ಅವರು ಕಾರ್ಯಕ್ರಮ ಆರಂಭಿಸಿದರು.

ಈ ವೇಳೆ ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾದಿಯಾಗಿ ಜನಪ್ರತಿನಿಧಿಗಳು ಮೂಕ ಪ್ರೇಕ್ಷಕರಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net