ಮೀಯಪದವು ಗ್ರಂಥಾಲಯದಲ್ಲಿ ಶಿಕ್ಷಕ ದಿನಾಚರಣೆ

New Project (5)
Published on

ಮಂಜೇಶ್ವರ: ಮೀಯಪದವು ಶ್ರೀ ವಿದ್ಯಾವರ್ಧಕ ಶಾಲಾ ಹಳೇ ವಿದ್ಯಾರ್ಥಿ ಸಂಘ ಆಶ್ರಯದಲ್ಲಿ ಶಿಕ್ಷಕರ ದಿನ ಆಚರಿಸಲಾಯಿತು.

ರಾಮಚಂದ್ರ ಕಾರ್ಯಕ್ರಮ ಉದ್ಘಾಟಿಸಿದರು. ಸತೀಶ್ ಬಿ.ಅಧ್ಯಕ್ಷತೆ ವಹಿಸಿದ್ದರು.

ವಿದ್ಯಾವರ್ಧಕ ಹಿರಿಯ ಪ್ರಾಥಮಿಕ ಶಾಲೆ ನಿವೃತ್ತ ಶಿಕ್ಷಕ ಜೋಕಿ ಮೊಂತೆರೊ ಅಮ್ಮೆನಡ್ಕ ಅವರನ್ನು ಗೌರವಿಸಲಾಯಿತು. ಮೀಂಜ ಪಂಚಾಯಿತಿ ವಿದ್ಯಾಭ್ಯಾಸ ಸಮಿತಿ ಕನ್ವೀನರ್ ರಾಮಚಂದ್ರ ಟಿ., ಮೀಂಜ ಮಂಗಲ್ಪಾಡಿ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಕಾರ್ಯದರ್ಶಿ ಸತೀಶ್ ಎಲಿಯಾಣ, ಸ್ವಪ್ನ ಭಟ್ ಮೊದಲಾದವರಿದ್ದರು. ಗ್ರಂಥಾಲಯ ಕಾರ್ಯದರ್ಶಿ ಸುರೇಶ ಬಂಗೇರ ಸ್ವಾಗತಿಸಿದರು. ತನ್ವಿ ಪ್ರಾರ್ಥಿಸಿದರು. ಗ್ರಂಥಪಾಲಕಿ ತುಳಸಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net