ಸಾಧನೆಗೆ ಗುರುಗಳ ಶ್ರಮ ಬುನಾದಿ : ನೌಫಾಲ್ ಅಹಮದ್ ಅಭಿಮತ

New Project (26)
Published on

ಮೂಲ್ಕಿ: ಭವಿಷ್ಯದಲ್ಲಿ ಯುವಜನತೆ ಸಾಧಕರಾಗಿ ರೂಪಗೊಳ್ಳುವಲ್ಲಿ ಗುರುಗಳ ಪ್ರಾಮಾಣಿಕ ಶ್ರಮ ಬುನಾದಿ ಎಂದು ಉದ್ಯಮಿ ನೌಫಾಲ್ ಅಹಮದ್ ಹೇಳಿದರು. ಕಾರ್ನಾಡ್ ಸಿಎಸ್‌ಐ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಮೂಲ್ಕಿ ಸಿಎಸ್‌ಐ ಚರ್ಚ್ ಧರ್ಮಗುರು ರೆ.ಸ್ಟೀವನ್ ಸರ್ವೋತ್ತಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಶಿಲ್ಪಿ ಶಿಕ್ಷಕ ಎಂದರು.

ಸಿಎಸ್‌ಐ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ, ನಿವೃತ್ತರಾದ ನೀರಜ ವಿ.ಆಳ್ವ ಅವರನ್ನು ಸನ್ಮಾನಿಸಲಾಯಿತು. ಶಿಕ್ಷಕರನ್ನು ಗೌರವಿಸಲಾಯಿತು. ಶಿಕ್ಷಕರಿಗಾಗಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ವಿದ್ಯಾರ್ಥಿಗಳಾದ ಶಮ್ನ, ರೋಶ್ನಿ ಶಿಕ್ಷಕ ದಿನದ ಮಹತ್ವ ತಿಳಿಸಿದರು. ಶಿಕ್ಷಕ ರಕ್ಷಕ ಸಂಘದ ಕಾರ್ಯದರ್ಶಿ ಆರಿಶ್, ಶಾಲಾ ಸಂಚಾಲಕ ರಂಜನ್ ಜತ್ತನ್ನ, ಮುಖ್ಯ ಶಿಕ್ಷಕಿ ಶಾಂತಿ ಡೇವಿಡ್ ಕರ್ಕಡ, ಕಾರ್ಯಕ್ರಮ ಸಂಯೋಜಕರಾದ ಎಲಿಜಬೆತ್ ಪುಷ್ಪಲತಾ, ಸೆಲ್ವಿ ಸುಧಾ ಉಪಸ್ಥಿತರಿದ್ದರು.

ವಿದ್ಯಾರ್ಥಿನಿ ಫಾತಿಮ ಸಫ ಸ್ವಾಗತಿಸಿದರು. ವಿದ್ಯಾರ್ಥಿ ರಿಶಾನ್ ಬಹುಮಾನಿತರ ಪಟ್ಟಿ ವಾಚಿಸಿದರು. ಶಿಕ್ಷಕಿ ಮೇವೀಸ್ ಸನ್ಮಾನಿತರ ಪಟ್ಟಿ ವಾಚಿಸಿದರು. ವಿದ್ಯಾರ್ಥಿನಿ ಭೂಮಿಕಾ ವಂದಿಸಿದರು. ವಿದ್ಯಾರ್ಥಿನಿ ಆಯಿಷತುಲ್ ಶಫ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net