

ಉಳ್ಳಾಲ: ಮನೆಯಲ್ಲಿ ಪಾಲಕರು ನಮಗೆ ಜೀವನದ ದಾರಿ ತೋರಿಸಿದರೆ, ನಂತರದ ಸ್ಥಾನ ಶಿಕ್ಷಕರಿಗೆ ಸಲ್ಲುತ್ತದೆ ಎಂದು ಉಳ್ಳಾಲ ದರ್ಗಾದ ಮಾಜಿ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ತ್ವಾಹಾ ಹೇಳಿದರು.
ಸಯ್ಯದ್ ಮದನಿ ಚಾರಿಟೆಬಲ್ ಟ್ರಸ್ಟ್ ಅಧೀನದ ಹಳೆಕೋಟೆ ಸಯ್ಯದ್ ಮದನಿ ಶಿಕ್ಷಣ ಸಂಸ್ಥೆಯಲ್ಲಿ ಶನಿವಾರ ಶಿಕ್ಷಕರ ದಿನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಆರ್.ಈಶ್ವರ್, ಹಳೆಕೋಟೆ ಮಸ್ಜಿದುಲ್ ಕರೀಂ ಅಧ್ಯಕ್ಷ ಝೈನುದ್ದೀನ್, ಶಾಲಾ ಸಂಚಾಲಕ ಇಸ್ಮಾಯಿಲ್ ಹಾಜಬ್ಬ, ಶಾಲಾಭಿವೃದ್ಧಿ ಸಮಿತಿ ಸದಸ್ಯ ಅಲ್ತಾಫ್ ಯು.ಎಚ್., ಮಾಜಿ ಸಂಚಾಲಕ ಇಬ್ರಾಹಿಂ ಎಂ.ಎಚ್., ಚಿತ್ರಕಲಾ ಶಿಕ್ಷಕರ ಸಂಘದ ಅಧ್ಯಕ್ಷ ರಫೀಕ್ ತುಂಬೆ, ನಿವೃತ್ತ ಶಿಕ್ಷಕಿ ಶಶಿಕಲಾ ಶೆಟ್ಟಿ, ಕಲ್ಲಾಪು ಹಝ್ರತ್ ಸಯ್ಯದ್ ಮದನಿ ಶಾಲೆ ಮುಖ್ಯಶಿಕ್ಷಕಿ ನಸೀಮಾ, ಕೋಟೆಪುರ ಗೀತಾ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಸಂಸ್ಥೆಯ ಮುಖ್ಯಶಿಕ್ಷಕ ಕೆಎಂಕೆ ಮಂಜನಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿನಿಯರಾದ ಫಾತಿಮ ಸಹಲಾ ವಂದಿಸಿದರು. ಸರೀಕತುಲ್ ತಬಸ್ಸುಮ್ ಮತ್ತು ಫಾತಿಮತ್ ಸಫಾ ಕಾರ್ಯಕ್ರಮ ನಿರೂಪಿಸಿದರು.