

ಬಂಟ್ವಾಳ: ಸಮಾಜ ಅಭಿವೃದ್ಧಿಗೆ ಮೂರ್ತೆದಾರರ ಕೊಡುಗೆ ಅಪಾರವಾಗಿದ್ದು, ಹಿರಿಯರ ದೂರದೃಷ್ಟಿ ಫಲವಾಗಿ ಮುನ್ನಡೆದಿದೆ ಎಂದು ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಹೇಳಿದರು. ದಕ್ಷಿಣ ಕನ್ನಡ ಜಿಲ್ಲಾ ಮೂರ್ತೆದಾರರ ಸಹಕಾರಿ ಮಹಾಮಂಡಲ ನಿಯಮಿತದ ಬಿ.ಸಿ.ರೋಡ್ ಬಂಟ್ವಾಳ ತಾಲೂಕು ಕೃಷಿಕ ಸಮಾಜ ಕಟ್ಟಡಕ್ಕೆ ಸ್ಥಳಾಂತರಿತ ಕೇಂದ್ರ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ಮೂರ್ತೆದಾರರ ಹೋರಾಟದಲ್ಲಿ ತಾನೂ ಭಾಗಿಯಾಗಿದ್ದು, ಲೀಟರ್ ಫೀ ಮನ್ನಾ ಮಾಡುವ ಅವಕಾಶ ತಾನು ಅಬಕಾರಿ ಮಂತ್ರಿಯಾಗಿದ್ದಾಗ ದೊರಕಿತ್ತು. ವರ್ತಮಾನದಲ್ಲಿರುವ ನಾವು ಇತಿಹಾಸ ಮರೆಯಬಾರದು. ಸಹಕಾರಿ ಸಂಘಗಳಿಂದ ಉದ್ಯೋಗಾವಕಾಶ ವೃದ್ಧಿಯಾಗುತ್ತದೆ, ಇದರಿಂದ ಸಮಾಜಕ್ಕೆ ಲಾಭವಾಗುತ್ತದೆ ಎಂದರು. ದ.ಕ.ಜಿಲ್ಲಾ ಮೂರ್ತೆದಾರರ ಸಹಕಾರಿ ಮಹಾಮಂಡಲ ಅಧ್ಯಕ್ಷ ಕೆ.ಸಂಜೀವ ಪೂಜಾರಿ ಅಧ್ಯಕ್ಷತೆ ವಹಿಸಿ, ಸಹಕಾರಿ ಮಹಾಮಂಡಲ ಮುನ್ನಡೆಯಲು ಎಲ್ಲರ ಸಹಕಾರ ದೊರಕಿದೆ. ಸ್ವಂತ ಕಟ್ಟಡ ಹೊಂದಲು ಪ್ರಯತ್ನಿಸಲಾಗುವುದು ಎಂದರು. ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ನೂತನ ಕೇಂದ್ರ ಕಚೇರಿ, ಶಾಸಕ ರಾಜೇಶ್ ನಾಕ್ ಉಳಿಪ್ಪಾಡಿ ಭದ್ರತಾ ಕೊಠಡಿ ಉದ್ಘಾಟಿಸಿದರು. 12 ಮೂರ್ತೆದಾರರನ್ನು ಸನ್ಮಾನಿಸಲಾಯಿತು. ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು, ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸದಸ್ಯೆ ಪ್ರತಿಭಾ ಕುಳಾಯಿ ಶುಭಹಾರೈಸಿದರು. ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘ ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ, ಉಡುಪಿ ಜಿಲ್ಲಾ ಮೂರ್ತೆದಾರರ ಮಹಾಮಂಡಲ ಮಾಜಿ ಅಧ್ಯಕ್ಷ ಕೊರಗ ಪೂಜಾರಿ, ಬುಡಾ ಅಧ್ಯಕ್ಷ ಬೇಬಿ ಕುಂದರ್, ಸಂಘ ಉಪಾಧ್ಯಕ್ಷ ರಾಜೇಶ್ ಸುವರ್ಣ ಉಪಸ್ಥಿತರಿದ್ದರು. ನಿರ್ದೇಶಕರಾದ ಪುರುಷ ಎನ್. ಸಾಲ್ಯಾನ್, ನೋಣಯ್ಯ ಪೂಜಾರಿ, ವಿಶ್ವನಾಥ ಪೂಜಾರಿ ಪಂಜ, ವಿಶ್ವನಾಥ ಬಿ, ಶಿವಪ್ಪ ಸುವರ್ಣ, ಪದ್ಮನಾಭ ಕೋಟ್ಯಾನ್, ಹರೀಶ್ ಪೂಜಾರಿ, ಗಣೇಶ್ ಪೂಜಾರಿ, ಉಷಾ ಅಂಚನ್, ಮುಖ್ಯಕಾರ್ಯನಿರ್ವಹಣಾಧಿಕಾರಿ ಕಿಶೋರ್ ಕುಮಾರ್ ಉಪಸ್ಥಿತರಿದ್ದರು. ಸಂಘದ ನಿರ್ದೇಶಕ ಆರ್.ಸಿ.ನಾರಾಯಣ್ ಸ್ವಾಗತಿಸಿದರು. ವಿಜಯಕುಮಾರ್ ಸೊರಕೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಶೈಲಜಾ ರಾಜೇಶ್ ವಂದಿಸಿದರು. ದಿನೇಶ್ ಸುವರ್ಣ ರಾಯಿ ಕಾರ್ಯಕ್ರಮ par ನಿರ್ವಹಿಸಿದರು ನಿವೇಶನ, ಧನಸಹಾಯಕ್ಕೆ ಮನವಿ ನೂತನ ಕಟ್ಟಡ ನಿರ್ಮಾಣಕ್ಕೆ ನಿವೇಶನ ಹಾಗೂ ಧನಸಹಾಯ ಒದಗಿಸುವ ಕುರಿತು ಸ್ಪೀಕರ್ ಯು.ಟಿ.ಖಾದರ್ ಅವರಿಗೆ ಮನವಿ ಸಲ್ಲಿಸಲಾಯಿತು. ನಿರ್ದೇಶಕ ಬೇಬಿ ಕುಂದರ್ ಮನವಿ ಪತ್ರ ವಾಚಿಸಿದರು.
ಹೊಸಕಟ್ಟಡ ನಿರ್ಮಾಣಕ್ಕೆ ನಿವೇಶನ ಗುರುತಿಸಿದರೆ, ಕಂದಾಯ ಸಚಿವರು ಹಾಗೂ ಮುಖ್ಯಮಂತ್ರಿ ಜತೆ ಮಾತನಾಡಿ ಸಹಕರಿಸಲಾಗುವುದು. ಸಾಮಾಜಿಕ ಸೌಹಾರ್ದಯುತ ಸಮಾಜ ನಿರ್ಮಾಣಕ್ಕೆ ಎಲ್ಲರ ಸಹಕಾರ ಬೇಕು, ಎಲ್ಲ ವರ್ಗದ ಜನರು ಭಾವೈಕ್ಯತೆಯಿಂದ ಜತೆಯಾಗಿ ಸಾಗುವುದೇ ನಿಜವಾದ ಅಭಿವೃದ್ಧಿ ಕಾರ್ಯ ಎಂದರು. ಯು.ಟಿ.ಖಾದರ್, ವಿಧಾನಸಭೆ ಸ್ಪೀಕರ್ ನಷ್ಟದಲ್ಲಿದ್ದ ಸಂಸ್ಥೆ ಇಂದು 13 ಲಕ್ಷ ರೂ. ಲಾಭಕ್ಕೆ ಬರಲು ಅಧ್ಯಕ್ಷ ಕೆ.ಸಂಜೀವ ಪೂಜಾರಿ ಅವರ ಪರಿಶ್ರಮ ಕಾರಣವಾಗಿದ್ದು, ಈ ಸಂಸ್ಥೆ ಸ್ವಂತ ಕಟ್ಟಡ ಹೊಂದಬೇಕಾಗಿದೆ. ಅದಕ್ಕೆ ಸಹಕಾರ ನೀಡುತ್ತೇವೆ, ಕಚೇರಿ ಪೀಠೋಪಕರಣಕ್ಕೆ ಎರಡು ಲಕ್ಷ ರೂ.ಗಳ ಆರ್ಥಿಕ ಸಹಕಾರ ನೀಡಲಾಗುವುದು. ಡಾ.ಎಂ.ಎನ್.ರಾಜೇಂದ್ರ ಕುಮಾರ್, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ