ಶಿಕ್ಷಕರು ವಿದ್ಯಾರ್ಥಿಗಳ ಜೀವನ ರೂಪಿಸುವ ಶಿಲ್ಪಿಗಳು

ಶಿಕ್ಷಕರು ವಿದ್ಯಾರ್ಥಿಗಳ ಜೀವನ ರೂಪಿಸುವ ಶಿಲ್ಪಿಗಳು
Published on

ಹಾಸನ: ರೋಟರಿ ಕ್ಲಬ್ ಆಫ್ ಸೆಂಟ್ರಲ್ ಹಾಸನ ವತಿಯಿಂದ ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರದಲ್ಲಿ ಸಾಧಕ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕ್ಲಬ್‌ನ ಅಧ್ಯಕ್ಷ ಎಂ.ಡಿ.ನಾಗೇಶ್, ಶಿಕ್ಷಕರು ಕೇವಲ ಪಾಠ ಹೇಳುವವರಲ್ಲ, ಅವರು ವಿದ್ಯಾರ್ಥಿಗಳ ಜೀವನ ರೂಪಿಸುವ ಶಿಲ್ಪಿಗಳು. ಸಮಾಜಕ್ಕೆ ನಿಷ್ಠಾವಂತ, ಜವಾಬ್ದಾರಿಯುತ ನಾಗರಿಕರನ್ನು ತಯಾರಿಸುವಲ್ಲಿ ಶಿಕ್ಷಕರ ಪಾತ್ರ ಅಪಾರ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಉಪನ್ಯಾಸಕ ಪ್ರಕಾಶ್ ಮೇಗಲಕೇರಿ ಮಾತನಾಡಿ, ಪ್ರಗತಿಶೀಲ ಸಮಾಜಕ್ಕೆ ಶಿಕ್ಷಣವೇ ಬಲವಾದ ಅಸ್ತ್ರವಾಗಿದ್ದು, ಶಿಕ್ಷಕರ ಪರಿಶ್ರಮದಿಂದ ವಿದ್ಯಾರ್ಥಿಗಳು ಜ್ಞಾನಪೂರ್ಣ ಭವಿಷ್ಯ ಕಟ್ಟಿಕೊಳ್ಳಲಿದ್ದಾರೆ ಎಂದರು.

ಉಪನ್ಯಾಸಕ ಹರೀಶ್ ಮಾತನಾಡಿ, ಉತ್ತಮ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ದೊಡ್ಡದಿದೆ ಎಂದು ಹೇಳಿದರು. ಕ್ಲಬ್‌ನ ಕಾರ್ಯದರ್ಶಿ ರೊ.ಅಶೋಕ್, ಖಜಾಂಚಿ ಯೋಗೇಶ್ ಗೌಡ, ಆನ್ಸ್ ಭಾರತಿ, ಅನುಪಮಾ, ಬಿ.ಆರ್. ಬೊಮ್ಮೇಗೌಡ ನಭಾ ನಾಗೇಶ್, ಆರ್.ಕೆ. ದಯಾನಂದ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net