ಮಾಸಾಂತ್ಯಕ್ಕೆ ಶಿಕ್ಷಕ ಸಾಹಿತಿಗಳ ಸಮಾವೇಶ : ಸ್ವಾಗತ ಸಮಿತಿಗೆ ಸಜ್ಜನ್ ಶೀಲವಂತ ನೇಮಕ

Tegaltippi
Published on

ವಿಜಯವಾಣಿ ಸುದ್ದಿಜಾಲ ಕಲಬುರಗಿ
ಕಲಬುರಗಿ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕರ್ನಾಟಕ ರಾಜ್ಯ ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ಸಹಯೋಗದೊಂದಿಗೆ ಸೆಪ್ಟೆಂಬರ್ ಮಾಸಾಂತ್ಯಕ್ಕೆ ಹಮ್ಮಿಕೊಳ್ಳಲು ಉದ್ದೇಶಿಸಲಾಗಿರುವ ಒಂದು ದಿನದ `ಶಿಕ್ಷಕ ಸಾಹಿತಿಗಳ ಸಮಾವೇಶ' ದ ಸ್ವಾಗತ ಸಮಿತಿಯ ಅಧ್ಯಕ್ಷ-ಕಾರ್ಯಾಧ್ಯಕ್ಷರಾಗಿ ನೇಮಕಗೊಂಡಿರುವ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಸುರೇಶ ಆರ್ ಸಜ್ಜನ್ ಹಾಗೂ ಗುರೂಜಿ ಡಿಗ್ರಿ ಕಾಲೇಜಿನ ಸಂಸ್ಥಾಪಕ ಕಲ್ಯಾಣಕುಮಾರ ಶೀಲವಂತ ಅವರನ್ನು ಸತ್ಕರಿಸಿ, ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಲು ಕೋರಲಾಯಿತು..
ಇಂಥ ಅಪರೂಪದ ಸಮಾವೇಶ ಪರಿಷತ್ತಿನ ಅಡಿಯಲ್ಲಿ ಇದೇ ಮೊದಲ ಬಾರಿಗೆ ನಡೆಯುತ್ತಿದೆ. ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಹಾಗೂ ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಮಹೇಶ ಹೂಗಾರ ಮಾತನಾಡಿ, ಶಿಕ್ಷಕರು ತಮ್ಮ ದೈನಂದಿನ ಪಾಠ ಪ್ರವಚನದ ಜತೆಗೆ ಕಲೆ, ಸಾಹಿತ್ಯ, ಸಂಗೀತ, ಸಾಂಸ್ಕೃತಿಕ, ಸಾಮಾಜಿಕ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಅನೇಕ ಶಿಕ್ಷಕರು ನಮ್ಮ ಭಾಗದಲ್ಲಿದ್ದಾರೆ. ಅರಿವಿನ ಲೋಕದಲ್ಲಿ ಹಿರಿಯರಾಗಿ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಆ ಕಾರಣಕ್ಕಾಗಿ ಶಿಕ್ಷಕ ವೃತ್ತಿಯೊಂದಿಗೆ ಸಾಹಿತ್ಯ ಕ್ಷೇತ್ರಕ್ಕೆ ವಿಶೇಷ ಕೊಡುಗೆ ಕೊಟ್ಟ ಅನೇಕ ಶಿಕ್ಷಕರನ್ನು ಒಂದುಗೂಡಿಸುವ ಮತ್ತು ಒಗ್ಗೂಡಿಸುವ ಪ್ರಯತ್ನ ಈ ಸಮಾವೇಶದ್ದಾಗಿದೆ.
ಆಹ್ವಾನ ಸ್ವೀಕರಿಸಿ ಮಾತನಾಡಿದ ಸುರೇಶ ಸಜ್ಜನ ಹಾಗೂ ಕಲ್ಯಾಣಕುಮಾರ ಶೀಲವಂತ ಅವರು, ನಮ್ಮ ಜಗತ್ತಿನಲ್ಲಿ ಅತ್ಯಂತ ಶ್ರೇಷ್ಠ ವೃತ್ತಿ ಯಾವುದುದೆಂದರೆ ಅದು ಶಿಕ್ಷಕ ವೃತ್ತಿ. ನಮ್ಮ ಇಂದಿನ ಸಮಾಜದಲ್ಲಿನ ಅಂಕುಡೊAಕುಗಳನ್ನು ತಿದ್ದುವುದರ ಜತೆಗೆ ಉತ್ತಮ ಸಮಾಜ ನಿರ್ಮಾಣಕ್ಕೆ ಶಿಕ್ಷಕರು ಸದಾ ಮುಂಚೂಣಿಯಲ್ಲಿದ್ದಾರೆ. ಇಂಥ ಶಿಕ್ಷಕರಲ್ಲಿನ ಕಲೆ, ಸಾಹಿತ್ಯ, ಸಂಗೀತ ಹೀಗೆ ವಿಶೇಷ ಪ್ರತಿಭೆಯನ್ನು ಹೊರಹಾಕಲು ಉತ್ತಮ ವೇದಿಕೆಯನ್ನು ಈ ಸಮಾವೇಶ  ನೀಡುತ್ತಲಿದೆ ಎಂದ ಅವರು, ಈ ಸಮಾವೇಶದ ಯಶಸ್ವಿಗೆ ಸಹಕರಿಸುವುದಾಗಿ ಹೇಳಿದರು.
ಪ್ರಮುಖರಾದ ಮಲ್ಲಿಕಾರ್ಜುನ ಸಲಗರ, ಶರಣಬಸಪ್ಪ ನಾಟಿಕರ್, ರಾಜೇಶ ನೀಲಹಳ್ಳಿ, ರಾಮು ಚೌಹಾಣ, ಪ್ರಕಾಶ ನರೋಣಾ, ಸತೀಶ ಹಳ್ಳಿ, ಚಿದಾನಂದ ಮೇತ್ರಿ, ಮುರಳೀಧರ ಟೋಣಪೆ, ಸೋಮನಗೌಡ, ರಾಜೇಂದ್ರ ಮಾಡಬೂಳ, ಶರಣರಾಜ್ ಛಪ್ಪರಬಂದಿ, ಪ್ರಭುಲಿಂಗ ಮೂಲಗೆ, ಶಿವಾನಂದ ಮಠಪತಿ, ಬಸ್ವಂತರಾಯ ಕೋಳಕೂರ, ಮಲ್ಲಿನಾಥ ಸಂಗಶೆಟ್ಟಿ, ಪ್ರಭವ ಪಟ್ಟಣಕರ್, ನಾಗನ್ನಾಥ ಯಳಸಂಗಿ, ಗಣೇಶ ಚಿನ್ನಾಕಾರ, ಶ್ರೀಕಾಂತ ಪಾಟೀಲ ತಿಳಗೂಳ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net