

ಬಂಟ್ವಾಳ: ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಗುರುತಿಸಿ, ಪೋಷಿಸುವ ಗುರುತರ ಜವಾಬ್ದಾರಿ ಪಾಲಕರ ಮೇಲಿದೆ. ಇತರ ಮಕ್ಕಳ ಜತೆ ಹೋಲಿಕೆ ಮಾಡದೆ, ನಮ್ಮ ಮಕ್ಕಳಲ್ಲಿ ಇರುವ ವಿಶೇಷತೆ ಗುರುತಿಸಿ ಪೋಷಿಸಬೇಕಾದದ್ದು ಪ್ರತಿಯೊಬ್ಬ ಪಾಲಕರ ಜವಾಬ್ದಾರಿ ಎಂದು ಅಲ್ಲಿಪಾದೆ ಸಂತ ಅಂತೋನಿ ದೇವಾಲಯ ಪ್ರಧಾನ ಧರ್ಮಗುರು ರಾಬರ್ಟ್ ಡಿಸೋಜ ಹೇಳಿದರು.
ಕಾರ್ಮೆಲ್ ಕಾಲೇಜು ಶಿಕ್ಷಕ-ರಕ್ಷಕ ಸಂಘದ ಮಹಾಸಭೆಯಲ್ಲಿ ಇತ್ತೀಚೆಗೆ ಮಾತನಾಡಿದರು. ಜಂಟಿ ಕಾರ್ಯದರ್ಶಿ ರೊಸಿಲ್ಡ್ ಎ.ಸಿ, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ರಿಚರ್ಡ್ ಮಿನೇಜಸ್, ಸಂಘದ ಸದಸ್ಯರು ಪಾಲ್ಗೊಂಡಿದ್ದರು. ಪಬ್ಲಿಕ್ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಪದವಿಪೂರ್ವ ವಿಭಾಗದ ಉಪಪ್ರಾಂಶುಪಾಲೆ ಮರಿಯಾ ಫೆಲ್ಸಿಟ ಎ.ಸಿ ಸ್ವಾಗತಿಸಿದರು. ಪ್ರಾಂಶುಪಾಲೆ ನವೀನ ಎ.ಸಿ ವಾರ್ಷಿಕ ವರದಿ ವಾಚಿಸಿದರು.ಶಿಕ್ಷಕಿ ಮರಿಯ ಶರ್ಮಿಳಾ ಕಾರ್ಯಕ್ರಮ ನಿರೂಪಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಸುರೇಶ್ ವೈ ವಂದಿಸಿದರು.