ನೇಣು ಬಿಗಿದ ಸ್ಥಿತಿಯಲ್ಲಿ ಶಿಕ್ಷಕನ ಶವ ಪತ್ತೆ

Published on

ಅರಕಲಗೂಡು:: ತಾಲೂಕಿನ ಮರಿತಮ್ಮನಹಳ್ಳಿ ಗ್ರಾಮಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಶಿಕ್ಷಕರೊಬ್ಬರ ಶವ ಮಂಗಳವಾರ ಪತ್ತೆಯಾಗಿದೆ.


ಹೊಳೆನರಸೀಪುರ ತಾಲೂಕು ತೆವಡಹಳ್ಳಿ ನಿವಾಸಿ ಲೋಕೇಶ್ (45) ಎಂದು ಗುರುತಿಸಲಾಗಿದೆ. 10 ದಿನಗಳಿಂದ ಯಲಗತವಳ್ಳಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಸೋಮವಾರ ಎಂದಿನಂತೆ ಕಾರ್ಯನಿರ್ವಹಿಸಿ ತೆರಳಿದ್ದರು. ಮಂಗಳವಾರ ಮರಿತಮ್ಮನಹಳ್ಳಿ ಗ್ರಾಮದ ಜಮೀನಿನೊಂದರಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಇವರ ಮೃತದೇಹ ಪತ್ತೆಯಾಗಿದೆ. ಮೃತದೇಹ ನೋಡಿದ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net