

ಕ್ಷಯರೋಗ ಜಾಗೃತಿ- ಸಮೀಕ್ಷೆ ಅಭಿಯಾನ ವಾಹನಕ್ಕೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ
ಯಾದಗಿರಿ: ಡಿಸೆಂಬರ್ 7 ರಿಂದ ಮಾರ್ಚ್ 24 ರವರೆಗೆ ಜಿಲ್ಲೆಯಾದ್ಯಂತ ರಾಷ್ಟ್ರೀಯ ಕ್ಷಯರೋಗ ನಿರ್ಮೂಲನೆ ಕಾರ್ಯಕ್ರಮದ ಅಂಗವಾಗಿ ಕ್ಷಯರೋಗ ಪತ್ತೆ ಸಮೀಕ್ಷೆ ನಡೆಯಲಿದ್ದು, ಸಂಶಯಾಸ್ಪದ ರೋಗಿಗಳ ಎಕ್ಸ್ ರೇ , ಕಫ ಪರೀಕ್ಷೆ ಮಾಡಲು ಹಾಗೂ ಈ ಕುರಿತು ಅರಿವು ಮೂಡಿಸುವ ವಾಹನಕ್ಕೆ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಜಿಲ್ಲಾಧಿಕಾರಿ ಡಾ.ಸುಶೀಲಾ. ಬಿ ಅವರು ಇಂದು ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.
ಇಂದಿನಿಂದ ನೂರು ದಿನಗಳ ಕಾಲ ನಡೆಯುವ ಈ ಅಭಿಯಾನ ಅಂಗವಾಗಿ ಜಿಲ್ಲೆಯಲ್ಲಿ ಗ್ರಾಮವಾರು ಕ್ಷಯರೋಗದ ಬಗ್ಗೆ ಪರಿಣಾಮಕಾರಿ ಜಾಗೃತಿ ಮೂಡಿಸಲಾಗುತ್ತದೆ.
ಈ ಅಭಿಯಾನ ಅಂಗವಾಗಿ ಮನೆ ಮನೆ ಕ್ಷಯರೋಗಿಗಳ ಸರ್ವೆ ಕಾರ್ಯದ ಜೊತೆಗೆ ಸಂಶಯಾಸ್ಪದ ರೋಗಿಗಳ ಎಕ್ಸ್ ರೇ, ಕಫ ಪರೀಕ್ಷೆ ಮಾಡಿ ಸೂಕ್ತ ಚಿಕಿತ್ಸಾ ವಿಧಾನಗಳ ಬಗ್ಗೆ ಸಲಹೆ ನೀಡಲಾಗುತ್ತದೆ.
ಕ್ಷಯರೋಗ ಮುನ್ನೆಚ್ಚರಿಕಾ ಕ್ರಮಗಳ , ಚಿಕಿತ್ಸಾ ವಿಧಾನಗಳ ಬಗ್ಗೆ ಅರಿವು ಜೊತೆಗೆ ಕ್ಷಯರೋಗಿಗಳಿಗೆ ಬೆಂಬಲ, ದತ್ತು ಪಡೆಯುವ ಕಾರ್ಯಕ್ರಮಸಹ ಇದು ಒಳಗೊಂಡಿದೆ.
ಈ ಸಂದರ್ಭದಲ್ಲಿ ಡಿಹೆಚ್ಓ ಡಾ.ಮಹೇಶ ಬಿರಾದಾರ್, ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ.ಸಂಜೀವ ಕುಮಾರ್ ರೈಚೂರಕರ್,ತಾಲೂಕಾ ಆರೋಗ್ಯ ಅಧಿಕಾರಿ ಡಾ. ಹಣಮಂತರೆಡ್ಡಿ,ನಗರ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ವಿನಿತಾ ಗಿಲ್, ಎನ್.ಟಿ.ಇ.ಪಿ ಕಾರ್ಯಕ್ರಮದ ಸಿಬ್ಬಂದಿ ಗಳು ಉಪಸ್ಥಿತರಿದ್ದರು.