

ವಿಜಯನಗರ: ಮೊನ್ನೆಮೊನ್ನೆಯಷ್ಟೇ ಕೆಆರ್ಎಸ್ ಜಲಾಶಯ ವರ್ಣರಂಜಿತವಾಗಿ ಕಣ್ಮನ ಸೆಳೆಯಲಾರಂಭಿಸಿದೆ. ಇದೀಗ ಆ ಸರದಿ ತುಂಗಾಭದ್ರಾ ಜಲಾಶಯದ್ದಾಗಿದೆ. ಏಕೆಂದರೆ ಟಿಬಿ ಡ್ಯಾಂ ಕೂಡ ಈಗ ವರ್ಣರಂಜಿತವಾಗಿದ್ದ ನೋಡುಗರ ಗಮನ ಸೆಳೆದು ಖುಷಿ ನೀಡುತ್ತಿದೆ.
ಕಲ್ಯಾಣ- ಕರ್ನಾಟಕದ ಜೀವನಾಡಿ ತುಂಗಭದ್ರಾ ಜಲಾಶಯಕ್ಕೆ ವಿದ್ಯುತ್ ದೀಪಾಲಂಕಾರ ಮಾಡಲಾಗಿದ್ದು, ಜಲಾಶಯದಿಂದ ಭೋರ್ಗರೆದು ಹೊರ ಬರುತ್ತಿರುವ ನೀರು ಬಣ್ಣಬಣ್ಣಗಳಿಂದ ಕೂಡಿದ್ದು ವಿಶೇಷ ಸೌಂದರ್ಯವನ್ನು ಉಂಟುಮಾಡಿದೆ.
ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನಲ್ಲಿರುವ ತುಂಗಭದ್ರಾ ಜಲಾಶಯ ಸಂಪೂರ್ಣವಾಗಿ ಭರ್ತಿಯಾಗಿರುವುದರಿಂದ ಇಂದು ಮಧ್ಯಾಹ್ನದಿಂದ ಅಪಾರ ಪ್ರಮಾಣದ ನೀರು ಹೊರಬಿಡಲಾಗಿದೆ.