ಪುರಸಭೆಯಲ್ಲಿ ತೆರಿಗೆ ಸಂಗ್ರಹಣಾ ಶಾಖೆ

25byd1
Published on

ಬ್ಯಾಡಗಿ: ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಸ್ಥಳೀಯ ಪುರಸಭೆಯಲ್ಲಿ ತೆರಿಗೆ ತುಂಬಲು ಅವಕಾಶ ಮಾಡಿಕೊಡಲಾಗಿದೆ ಎಂದು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಹೇಳಿದರು.

ಪಟ್ಟಣದ ಪುರಸಭೆ ಆವರಣದಲ್ಲಿ ಯೂನಿಯನ್ ಬ್ಯಾಂಕ್ ಆಪ್ ಇಂಡಿಯಾ ಸಹಯೋಗದಲ್ಲಿ ಶುಕ್ರವಾರ ತೆರಿಗೆ ಸಂಗ್ರಹಣಾ ಶಾಖೆ ಉದ್ಘಾಟಿಸಿ ಅವರು ಮಾತನಾಡಿದರು.

ಪಟ್ಟಣದ ಜನತೆಗೆ ಪುರಸಭೆ ಎಲ್ಲ ಸೌಲಭ್ಯ ಕಲ್ಪಿಸುತ್ತಿದ್ದು, ಜನರು ವಿವಿಧ ತೆರಿಗೆಗಳನ್ನು ಸಕಾಲಕ್ಕೆ ತುಂಬಿದಲ್ಲಿ ಇನ್ನಷ್ಟು ಅನುಕೂಲವಾಗಲಿದೆ ಎಂದರು.

ಪುರಸಭೆ ಮುಖ್ಯಾಧಿಕಾರಿ ವಿ.ಎಂ. ಪೂಜಾರ ಮಾತನಾಡಿ, ಪುರಸಭೆ ವತಿಯಿಂದ ಸ್ಥಳೀಯ ನಾಗರಿಕರಿಗೆ ನೀರು, ಬೆಳಕು, ರಸ್ತೆ ಸೇರಿ ಹಲವು ಸೌಲಭ್ಯಗಳನ್ನು ನೀಡಲಾಗಿದೆ. ಸ್ವಚ್ಛತೆಗೆ ಪುರಸಭೆ ಮಹತ್ವ ನೀಡಿದೆ. ಕರೊನಾ ವೈರಸ್ ತಡೆಗಟ್ಟಲು ಇಡೀ ಪಟ್ಟಣಕ್ಕೆ ಎರಡ್ಮೂರು ಬಾರಿ ಔಷಧ ಸಿಂಪಡಿಸಿದ್ದೇವೆ ಎಂದರು.

ತಹಸೀಲ್ದಾರ್ ಶರಣಮ್ಮ ಕಾರಿ, ಪುರಸಭೆ ಸದಸ್ಯರಾದ ಬಿ.ಎಂ. ಛತ್ರದ, ಬಾಲಚಂದ್ರಗೌಡ್ರ ಪಾಟೀಲ, ರಾಮಣ್ಣ ಕೋಡಿಹಳ್ಳಿ, ಸುಭಾಸ ಮಾಳಗಿ, ಯೂನಿಯನ್ ಬ್ಯಾಂಕ್ ವ್ಯವಸ್ಥಾಪಕ ದಂಡುನಾಯಕ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net