ಹೈವೇನಲ್ಲಿ ಟಾಂಗಾ ರೇಸ್​- ನಾಲ್ವರ ಬಂಧನ

Tanga_Crime
Published on

ತುಮಕೂರು: ಹೆದ್ದಾರಿಯಲ್ಲಿ ಟಾಂಗಾ ಗಾಡಿ ರೇಸ್​ನಲ್ಲಿ ಜೂಜಾಟ ಆಡುತ್ತಿದ್ದ ನಾಲ್ವರನ್ನು ಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಗೆದ್ದಲಹಳ್ಳಿ ಜಂಕ್ಷನ್​ ಬಳಿಯ ರಿಂಗ್​ ರಸ್ತೆಯ ಹತ್ತಿರದ ರೇವತಿ ಬಾರ್​ ಮುಂಭಾಗದಿಂದ ಅಶ್ವಿನಿ ಆಯುರ್ವೇದಿಕ್​ ಕಾಲೇಜ್​ ವರೆಗೆ ಕುದುರೆ ಟಾಂಗಾ ಗಾಡಿಗಳ ರೇಸ್​ನಲ್ಲಿ ಹಣ ಪಣವಾಗಿಟ್ಟು ಜೂಜು ಆಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಪೊಲೀಸರು ಜಿಸಿಆರ್​ ಕಾಲನಿಯ ಹನೀಫ್ (22), ಮಹಮದ್​ ದಸ್ತಗಿರ್​ (22), ಇರ್ಷಾದ್​ ಪಾಷ (23) ಹಾಗೂ ಹೆಗಡೆ ಕಾಲನಿಯ ವಸಿಮ್​ ಪಾಷ (24)ರನ್ನು ಬಂಧಿಸಿದ್ದಾರೆ. ಎರಡು ಕುದರೆ, ಟಾಂಗಾ ಗಾಡಿಗಳು ಹಾಗೂ ಪಣಕಿಟ್ಟಿದ್ದ 5700 ರೂ.ಗಳನ್ನು ವಶಕ್ಕೆ ಪಡೆಯಲಾಗಿದೆ. ಜಯನಗರ ಕಲಂ 87 ಕೆ.ಪಿ ಆಕ್ಟ್​ ರೀತ್ಯಾ ಪ್ರಕರಣ ದಾಖಲಿಸಲಾಗಿದೆ.

ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಪೊಲೀಸರನ್ನು ಜಿಲ್ಲಾ ಪೊಲೀಸ್​ ಅಧೀಕ್ಷಕ ಕೆ.ವಿ. ಅಶೋಕ್​ ಶ್ಲಾಘಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net