ಶ್ರವಣಬೆಳಗೊಳಕ್ಕೆ ತಮಿಳುನಾಡು ರಾಜ್ಯಪಾಲ ಭೇಟಿ

14 SBG -1 TN Govrnr Visit (1)
Published on

ಶ್ರವಣಬೆಳಗೊಳ: ತಮಿಳುನಾಡಿನ ರಾಜ್ಯಪಾಲ ರವೀಂದ್ರ ನಾರಾಯಣ ರವಿ ಹಾಗೂ ಅವರ ಪತ್ನಿ ಲಕ್ಷ್ಮೀ ಅವರು ಮಂಗಳವಾರ ಶ್ರೀಕ್ಷೇತ್ರ ಶ್ರವಣಬೆಳಗೊಳದ ವಿಂಧ್ಯಗಿರಿ ಬೆಟ್ಟಕ್ಕೆ ಭೇಟಿ ನೀಡಿ ಭಗವಾನ್ ಶ್ರೀಬಾಹುಬಲಿಸ್ವಾಮಿ ಹಾಗೂ ಶ್ರೀಮಠಕ್ಕೆ ಆಗಮಿಸಿ ಶ್ರೀಕೂಷ್ಮಂಡಿನಿ ದೇವಿಯ ದರ್ಶನ ಪಡೆದರು.


ನಂತರ ಸ್ವಸ್ತಿಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರೊಂದಿಗೆ ಸಮಾಲೋಚನೆ ನಡೆಸಿ ಆಶೀರ್ವಾದ ಪಡೆದರು. ಆರ್.ಎನ್.ರವಿ ದಂಪತಿಗೆ ಕ್ಷೇತ್ರದ ವತಿಯಿಂದ ಗ್ರಂಥಗಳು, ಶ್ರೀಫಲ ಹಾಗೂ ರಜತ ಕಳಸ ನೀಡಿ ಗೌರವಿಸಲಾಯಿತು.


ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯಪಾಲ ರವೀಂದ್ರ ನಾರಾಯಣ ರವಿ ಅವರು, ವಿಶ್ವ ಪ್ರಸಿದ್ಧ ಬಾಹುಬಲಿಸ್ವಾಮಿಯ ಏಕಶಿಲಾ ಮೂರ್ತಿ, ಕ್ಷೇತ್ರದ ಐತಿಹಾಸಿಕ ಹಿನ್ನೆಲೆ, ಶಿಲಾ ಶಾಸನಗಳು, ಧಾರ್ಮಿಕ ವಿಧಿ-ವಿಧಾನ, ಕಲೆ-ಸಾಹಿತ್ಯದ ಜೀವಂತಿಕೆಯನ್ನು ನೋಡಿ ಬಹಳ ಖುಷಿಯಾಯಿತು. ಶಾಲಾ ದಿನಗಳಲ್ಲಿ ಚಂದ್ರಗುಪ್ತ ಮೌರ್ಯ ಹಾಗೂ ಭದ್ರಬಾಹು ಮುನಿಗಳ ಬಗ್ಗೆ ಓದಿದ್ದೆನು. ಅಂದಿನಿಂದಲೂ ಶ್ರವಣಬೆಳಗೊಳಕ್ಕೆ ಬರಬೇಕು ಎಂದು ಅಪೇಕ್ಷೆ ಇತ್ತು ಎಂದು ತಿಳಿಸಿದರು. ಮುಂದಿನ 2030ರ ಮಹಾಮಸ್ತಕಾಭಿಷೇಕ ಮಹೋತ್ಸವಕ್ಕೆ ಬರುವುದಾಗಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net