ಬೆಡ್‌ನ ಕೆಳಗಿತ್ತು ತಲವಾರ್‌

Man Holding talavar
Published on

ಹೊನ್ನಾವರ: ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಸಮೀಪದ ನಾಗರಾಜ ರಮೇಶ ನಾಯ್ಕ ಎಂಬಾತನ ಮನೆಯಲ್ಲಿ ಒಂದು ತಲವಾರ್‌ ಪತ್ತೆಯಾಗಿದೆ.

ಮಂಗಳವಾರ ಪೊಲೀಸರು ದಾಳಿ ನಡೆಸಿ ಆರೋಪಿ ಸಮೇತ ಮಾರಕಾಶ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.

ಮುಂಬರುವ ವಿಧಾನಸಭೆ ಚುನಾವಣೆಯ ಸಮಯದಲ್ಲಿ  ಯಾವುದೇ ರಾಜಕೀಯ ಪಕ್ಷದ ಪರವಾಗಿ ಬೆಂಬಲಿಸಿ ಯಾವುದೇ ಕೃತ್ಯ ಎಸಗುವ, ಸಂಚನ್ನು ರೂಪಿಸುವ ಸಾಧ್ಯತೆಯಿರುವ ಕಾರಣ ಸಿಪಿಐ  ಮಂಜುನಾಥ ಇ.ಒ. ನೇತ್ರತ್ವದಲ್ಲಿ ಮಾರಕಾಸ್ತ್ರ ವಶಕ್ಕೆ ಪಡೆದಿದ್ದಾರೆ.

ಪೊಲೀಸರು ಮಂಗಳವಾರ ಬೆಳಗ್ಗೆ  6-40 ಗಂಟೆಗೆ  ಹೋಗಿ ಮನೆಯನ್ನು ಶೋಧಿಸುವ ಕುರಿತು  ನ್ಯಾಯಾಲಯದಿಂದ ಶೋಧನಾ ವಾರೆಂಟ್ ಪಡೆದ ವಿಷಯ ತಿಳಿಸಿ,

ಶೋಧನಾ ವಾರೆಂಟ್‌ನ್ನು ತೋರಿಸಿದರು. ಎರಡು ತಾಸುಗಳ ಕಾಲ ಆತನ ಮನೆಯ ಶೋಧನೆಯನ್ನು ಪಂಚರ ಸಮಕ್ಷಮ ಸಿಬ್ಬಂದಿಯೊಂದಿಗೆ ಕೈಗೊಂಡಿದ್ದರು.

ಈ ವೇಳೆ ಮನೆಯ ಮಂಚದ ಮೇಲಿರುವ ಬೆಡ್‌ನ ಕೆಳಗೆ ಎರಡುವರೆ ಅಡಿ ಉದ್ದದ ಒಂದು ಕಡೆ ಹರಿತವಾಗಿರುವ ಕಬ್ಬಿಣದ ಲಾಂಗ್‌ನ್ನು ಇಟ್ಟುಕೊಂಡಿದ್ದು ಪತ್ತೆಯಾಗಿದೆ.

ಈ ಮಾರಕಾಸ್ತ್ರದ ಬಗ್ಗೆ ನಾಗರಾಜ ರಮೇಶ್ ನಾಯ್ಕನಿಗೆ ವಿಚಾರಿಸಿದ್ದರು. ಆತನು ಸಮರ್ಪಕವಾಗಿ ಉತ್ತರಿಸಿಲ್ಲ ಎನ್ನಲಾಗಿದೆ. ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net