ಮಕ್ಕಳ ಸುರಕ್ಷತೆಗೆ ಮುಂಜಾಗ್ರತಾ ಕ್ರಮ : ಆಡಳಿತಾಧಿಕಾರಿ ಮಂಜುನಾಥ್ ನಿರ್ದೇಶನ

New Project (2)
Published on

ಬಂಟ್ವಾಳ: ತಾಲೂಕು ಪಂಚಾಯಿತಿ ಸಾಮಾನ್ಯ ಸಭೆ ಹಾಗೂ ಇಲಾಖಾಧಿಕಾರಿಗಳ ಮಾಸಿಕ ಪ್ರಗತಿ ಪರಿಶೀಲನಾ ಸಭೆ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆಯಿತು.

ಆಡಳಿತಾಧಿಕಾರಿ ಮಂಜುನಾಥ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಇ ಆಫೀಸ್ ಆಗಿ ತಾಲೂಕಿನ ಎಲ್ಲ ಕಚೇರಿಗಳು ಬದಲಾಗಬೇಕು. ತಾಲೂಕುಮಟ್ಟದಲ್ಲಿ ಮುಂದಿನ ಮಳೆಗಾಲ ಸಂದರ್ಭ ಶಾಲೆ, ಅಂಗನವಾಡಿ ಸಹಿತ ಯಾವುದೇ ಸಮಸ್ಯೆಗಳು ತಲೆದೋರದಂತೆ ಮುಂಜಾಗರೂಕತೆ ವಹಿಸಲು ಹಾಗೂ ಅದಕ್ಕೆ ಬೇಕಾದ ಪೂರಕ ವ್ಯವಸ್ಥೆಗಳನ್ನು ಕಲ್ಪಿಸಲು ಇಲಾಖೆಗಳ ಮುಖ್ಯಸ್ಥರು ತಾಲೂಕು ಪಂಚಾಯಿತಿ ಜತೆ ಸಮನ್ವಯದಿಂದ ಕೆಲಸ ಮಾಡಲು ಸಲಹೆ ನೀಡಿದರು.

ಬಹಳಷ್ಟು ಇಲಾಖೆಗಳು ಮಾಸಿಕ ಪ್ರಗತಿ ವರದಿಗಳನ್ನು ನೀಡದೆ ಇದ್ದ ಹಿನ್ನೆಲೆಯಲ್ಲಿ ಶೀಘ್ರ ಇನ್ನೊಂದು ಸಭೆ ಕರೆಯುವುದಾಗಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸಚಿನ್ ಕುಮಾರ್ ತಿಳಿಸಿದರು.

ಬಂಟ್ವಾಳ ಸಿಡಿಪಿಒ ಮವ್ತಾಜ್, ತಾಲೂಕು ಆರೋಗ್ಯಾಧಿಕಾರಿ ಡಾ.ಅಶೋಕ್ ಕುಮಾರ್ ರೈ, ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥನ್, ಪಶುವೈದ್ಯಕೀಯ ಇಲಾಖಾಧಿಕಾರಿ ಡಾ.ಅವಿನಾಶ್, ಪಂಚಾಯತ್‌ರಾಜ್ ಇಂಜಿನಿಯರಿಂಗ್ ವಿಭಾಗದ ಎಇಇ ತಾರಾನಾಥ ಸಾಲ್ಯಾನ್, ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ಜೋ ಪ್ರದೀಪ್ ಡಿಸೋಜ, ಮೆಸ್ಕಾಂ ಎಇಇ ನಾರಾಯಣ ಭಟ್, ತಾಲೂಕು ಉಪತಹಸೀಲ್ದಾರ್ ನರೇಂದ್ರನಾಥ್ ಮಿತ್ತೂರು, ಕೃಷಿ ಇಲಾಖೆ ತಾಂತ್ರಿಕ ಅಧಿಕಾರಿ ನಂದನ್ ಶೆಣೈ ಸಹಿತ ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದು, ಇಲಾಖಾವಾರು ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net