

ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ
ಮೈಸೂರು ದಸರಾ ಪ್ರಯುಕ್ತ ಸ್ವರಾಜ್ಯ ಹಾಗೂ ವಿದ್ಯಾಗಿರಿ ಮೈದಾನದಲ್ಲಿ ನಡೆದ ತಾಲೂಕುಮಟ್ಟದ ವಿವಿಧ ಗುಂಪು ಆಟಗಳು ಮತ್ತು ವೈಯಕ್ತಿಕ ಕ್ರೀಡೆಗಳಲ್ಲಿ ಆಳ್ವಾಸ್ ತಂಡ ಸಮಗ್ರ ಪ್ರಶಸ್ತಿ ಪಡೆದುಕೊಂಡಿದೆ.
ಪ್ರಥಮ ಸ್ಥಾನ ಪಡೆದ ತಂಡಗಳು ಮತ್ತು ವೈಯಕ್ತಿಕ ಪ್ರಥಮ ಸ್ಥಾನ ಪಡೆದ ಕ್ರೀಡಾಪಟುಗಳು ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ನಡೆಯುವ ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.
*ಫಲಿತಾಂಶ: ಪುರುಷರ ವಿಭಾಗ: ಥ್ರೋಬಾಲ್ ವಿಭಾಗದಲ್ಲಿ ಬೆದ್ರ ಫ್ರೆಂಡ್ಸ್ ಪ್ರಥಮ ಸ್ಥಾನ, ಸ್ವಾಮಿ ವಿವೇಕಾನಂದ ಎಡಪದವು ದ್ವೀತಿಯ, ಕಬಡ್ಡಿಯಲ್ಲಿ ಆಳ್ವಾಸ್ ಪ್ರಥಮ, ಎಂ.ಕೆ.ಅನಂತರಾಜ ಆಫ್ ಫಿಸಿಕಲ್ ಎಜುಕೇಶನ್ ದ್ವೀತಿಯ, ವಾಲಿಬಾಲ್ ವಿಭಾಗದಲ್ಲಿ ಆಳ್ವಾಸ್ ಪ್ರಥಮ, ವಿದ್ಯಾಗಿರಿ ದ್ವೀತಿಯ, ಖೋ&ಖೋ ವಿಭಾಗದಲ್ಲಿ ಆಳ್ವಾಸ್ ಪ್ರಥಮ, ಸ್ಟಾರ್ ಬಾಯ್ಸ್ ದ್ವೀತಿಯ ಸ್ಥಾನ, ಫುಟ್ಬಾಲ್ ವಿಭಾಗದಲ್ಲಿ ಜೈನ್ ಪಿಯು ಕಾಲೇಜು ಪ್ರಥಮ, ಮಹಾವೀರ ಕಾಲೇಜು ದ್ವೀತಿಯ ಸ್ಥಾನ ಪಡೆದಿದೆ.
*ಮಹಿಳಾ ವಿಭಾಗ: ಥ್ರೋಬಾಲ್ ವಿಭಾಗದಲ್ಲಿ ಆಳ್ವಾಸ್ ಪ್ರಥಮ, ತುಳುನಾಡು ಯುನೈಟೆಡ್ ದ್ವೀತಿಯ, ಕಬಡ್ಡಿ ವಿಭಾಗದಲ್ಲಿ ಆಳ್ವಾಸ್ ಪ್ರಥಮ, ಮಹಾವೀರ ಕಾಲೇಜು ದ್ವೀತಿಯ, ವಾಲಿಬಾಲ್ ವಿಭಾಗದಲ್ಲಿ ಆಳ್ವಾಸ್ ಪ್ರಥಮ, ಜೈನ್ ಪಿಯು ಕಾಲೇಜು ದ್ವೀತಿಯ, ಖೋ&ಖೋ ವಿಭಾಗದಲ್ಲಿ ಆಳ್ವಾಸ್ ಪ್ರಥಮ, ತೆಂಕಮಿಜಾರು ದ್ವೀತಿಯ, ಯೋಗ ಬಾಲಕರು ಮತ್ತು ಬಾಲಕಿಯರ ವಿಭಾಗದಲ್ಲಿ ಟ್ರೆಡಿಷನಲ್ ಮತ್ತು ಆರ್ಟಿಸ್ಟಿಕ್ನಲ್ಲಿ ಆಳ್ವಾಸ್ ಪ್ರಥಮ ಮತ್ತು ದ್ವೀತಿಯ ಸ್ಥಾನ ಪಡೆದಿದೆ.
ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ 31 ಚಿನ್ನ, 29 ಬೆಳ್ಳಿ, 22 ಕಂಚು ಒಟ್ಟು 82 ಪದಕಗಳನ್ನು ಆಳ್ವಾಸ್ ಪಡೆದಿದೆ. ವಿಜೇತ ಕ್ರೀಡಾಪಟುಗಳಿಗೆ ಸಂಸ್ಥೆಯ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಅಭಿನಂದಿಸಿದ್ದಾರೆ.