ಸಹಕಾರಿಗಳಿಂದ ಕೃಷಿಕರ ಬದುಕಿಗೆ ಭದ್ರತೆ : ಸಪ್ತಾಹ ಉದ್ಘಾಟಿಸಿ ಹರೀಶ್ ಪೂಂಜ ಅಭಿಮತ

Published on

ಉಪ್ಪಿನಂಗಡಿ : ಗ್ರಾಮೀಣ ಭಾಗದ ಕೃಷಿಕರ ಬದುಕು ಬೆಳಗಿಸುವಲ್ಲಿ ಸಹಕಾರಿ ಸಂಸ್ಥೆಗಳ ಪಾತ್ರ ಮಹತ್ತರವಾಗಿದೆ. ಸದಾ ಅತಂತ್ರವಾಗಿದ್ದ ಕೃಷಿಕರ ಬದುಕಿಗೆ ಜೀವನ ಭದ್ರತೆ ಒದಗಿಸಿದ ಖ್ಯಾತಿ ಸಹಕಾರಿ ಸಂಸ್ಥೆಗಳದ್ದಾಗಿದೆ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಹೇಳಿದರು.

ಬಾರ್ಯದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಶ್ರಯದಲ್ಲಿ ಸಹಕಾರಿ ರತ್ನ ದಿವಂಗತ ನಿರಂಜನ್ ರೈ ಬಾವಂತಬೆಟ್ಟು ವೇದಿಕೆಯಲ್ಲಿ ಸೋಮವಾರ ನಡೆದ ತಾಲೂಕು ಮಟ್ಟದ 71ನೇ ಅಖಿಲ ಭಾರತ ಸಹಕಾರಿ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಸಹಕಾರಿ ಮೆರವಣಿಗೆ ಉದ್ಘಾಟಿಸಿದರು. ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ ದ್ವಜಾರೋಹಣಗೈದರು. ಬಾರ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಪ್ರವೀಣ್ ರೈ ಅಧ್ಯಕ್ಷತೆ ವಹಿಸಿದ್ದರು. ಮೂಡುಬಿದಿರೆ ಶ್ರೀ ಧವಳ ಕಾಲೇಜಿನ ಅಸಿಸ್ಟೆಂಟ್ ಪ್ರೊಫೆಸರ್ ಸಂತೋಷ್ ಶೆಟ್ಟಿ ವಿಚಾರಗೋಷ್ಠಿ ನಡೆಸಿಕೊಟ್ಟರು.

ತಣ್ಣೀರುಪಂತ ಸಹಕಾರಿ ಸಂಘದ ಅಧ್ಯಕ್ಷ ಜಗದೀಶ್ ಶೆಟ್ಟಿ ಮೈರಾ, ತೆಕ್ಕಾರು ಸಹಕಾರಿ ಸಂಘದ ಅಧ್ಯಕ್ಷ ಅಬ್ದುಲ್ ರಝಾಕ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಉಸ್ಮಾನ್ ಪಿ.ಕೆ, ತಾಲೂಕು ಸಹಕಾರಿ ಅಭಿವೃದ್ಧಿ ಅಧಿಕಾರಿ ಬಿ.ವಿ.ಪ್ರತಿಮಾ, ತಾಲೂಕು ಯೂನಿಯನ್ ಬ್ಯಾಂಕ್ ಅಧ್ಯಕ್ಷ ಸತೀಶ್ ಕೆ., ಪುತ್ತೂರು ಸಹಕಾರಿ ಸಂಘಗಳ ಸಹಾಯಕ ನಿಬಂಧಕ ಎಸ್.ಎಂ.ರಘು, ಜಿಲ್ಲಾ ಸಹಕಾರಿ ಉಪ ನಿಬಂಧಕ ರಮೇಶ್ ಹೆಚ್.ಎನ್., ಪ್ರಮುಖರಾದ ಪ್ರಸನ್ನ ರೈ, ಪ್ರಶಾಂತ್ ಪೈ, ಜಯಾನಂದ ಕಲ್ಲಾಪು, ಶಿವರಾಮ, ಮನೋಹರ ಶೆಟ್ಟಿ ಬಾರ್ಯ, ರಕ್ಷಿತ್ ಪಿ, ಕಾರ್ಯನಿರ್ವಹಣಾಧಿಕಾರಿ ಸತೀಶ್ ಗೌಡ ಮತ್ತಿತರರು ಉಪಸ್ಥಿತರಿದ್ದರು.

ಸಂಘದ ನಿರ್ದೇಶಕ ರಾಜೇಶ್ ರೈ ಸ್ವಾಗತಿಸಿದರು. ಹಾಲು ಉತ್ಪಾದಕರ ಸಂಘದ ನಿರ್ದೇಶಕ ಜನಾರ್ಧನ ಗೌಡ ವಂದಿಸಿದರು. ಪತ್ರಕರ್ತ ಗಣೇಶ್ ಪಿಲಿಕ್ಕಲ್ ಕಾರ್ಯಕ್ರಮ ನಿರೂಪಿಸಿದರು.

ಸನ್ಮಾನ

ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕ ಪದ್ಮನಾಭ ಅರ್ಕಜೆ, ಯೂನಿಯನ್ ಸಹಕಾರಿ ಬ್ಯಾಂಕ್ ನಿರ್ದೇಶಕಿ ಸಾವಿತ್ರಿ ರೈ, ತಣ್ಣೀರುಪಂತ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಜಯರಾಜ್ ಹೆಗ್ಡೆ ಇವರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net