ತಾಲೂಕು ಸಮಿತಿ ವಾರ್ಷಿಕ ಮಹಾಸಭೆ

byn (1)
Published on

ಬೈಂದೂರು: ದ.ಕ., ಉಡುಪಿ ಜಿಲ್ಲಾ ಜವಾತುಲ್ ಫಲಾಹದ ತಾಲೂಕು ಸಮಿತಿ ವಾರ್ಷಿಕ ಮಹಾಸಭೆ, ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಮಂಗಳವಾರ ಬೈಂದೂರು ತಾಲೂಕು ಜವಾತುಲ್ ಫಲಾಹ ಕಚೇರಿಯಲ್ಲಿ ನಡೆಯಿತು.

ದ.ಕ. ಜಿಲ್ಲಾ ಸಮಿತಿ ಕಾರ್ಯದರ್ಶಿ ಅಬ್ದುಲ್ ಗಫೂರ್, ದ.ಕ. ಜಿಲ್ಲಾ ಸಮಿತಿ ವ್ಯಾನೇಜರ್ ಆದಂ ಬ್ಯಾರಿ ಸಮ್ಮುಖದಲ್ಲಿ ನಡೆಸಲಾಯಿತು. ಸಮಿತಿ ಆಯವ್ಯಯಗಳ ಬಗ್ಗೆ ಚರ್ಚಿಸಲಾಯಿತು. ನೂತನ ಅಧ್ಯಕ್ಷರಾಗಿ ಎಚ್.ಎಸ್.ಸಿದ್ದೀಕ್ ಅವರನ್ನು ಸರ್ವಾನುಮತದಿಂದ ಆಯ್ಕೆ ವಾಡಲಾಯಿತು. ಉಪಾಧ್ಯಕ್ಷರಾಗಿ ಅಜ್ಮಲ್ ಶಿರೂರು, ನೌಷದ್ ಬಿಎ್ಎನ್, ಕಾರ್ಯದರ್ಶಿಗಳಾಗಿ ಶೇಖ್ ಫಯಾಜ್ ಆಲಿ, ಜತೆ ಕಾರ್ಯದರ್ಶಿಯಾಗಿ ಆಮೀನ್ ಗೋಳಿಹೊಳೆ, ಕೋಶಾಧಿಕಾರಿಯಾಗಿ ಮನ್ಸೂರ್ ಇಬ್ರಾಹಿಂ, ಸಂಟನಾ ಕಾರ್ಯದರ್ಶಿಯಾಗಿ ವೈ.ಮುಷೀನ್, ಪತ್ರಿಕಾ ಸಲಹೆಗಾರರಾಗಿ ಕರಣಿ ಮೊಹಿದ್ದೀನ್ ಆಯ್ಕೆಯಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net