

ಕೋಟ: ದಿ.ಮಂಜುನಾಥ್ ಅಕ್ಸಾಲರ ಧರ್ಮಪತ್ನಿ ದಿ. ಪದ್ದು ಆಚಾರ್ಯ ಸ್ಮರಣಾರ್ಥ ವಡ್ಡರ್ಸೆ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ನೇತ್ರ ಹಾಗೂ ಆರೋಗ್ಯ ಉಚಿತ ತಪಾಸಣೆ ಶಿಬಿರ ನಡೆಯಿತು.
ಕೋಟ ಸಾಲಿಗ್ರಾಮ ರೋಟರಿ ಕ್ಲಬ್, ಗಿಳಿಯಾರು ಲಯನ್ಸ್ ಕ್ಲಬ್, ಶಿರೂರು ಪಾರ್ವತಿ ಮಹಾಬಲ ಶೆಟ್ಟಿ ಚಾರಿಟೆಬಲ್ ಟ್ರಸ್ಟ್, ಅಂಧತ್ವ ನಿವಾರಣಾ ವಿಭಾಗ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವಡ್ಡರ್ಸೆ ಗ್ರಾಪಂ, ಸಾಹೇಬರಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸಂಯುಕ್ತಾಶ್ರಯದಲ್ಲಿ ಶಿಬಿರ ಆಯೋಜಿಸಲಾಗಿತ್ತು.
ಶಿಬಿರ ಉದ್ಘಾಟಿಸಿದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಸೀತಾರಾಮ ಆಚಾರ್ಯ ಮತ್ತವರ ಕುಟುಂಬದ ಸವಾಜಮುಖಿ ಕಾರ್ಯಕ್ರಮ ಪ್ರತಿಯೊಂದು ಸಂ ಸಂಸ್ಥೆಗೆ ವಾದರಿಯಾಗಿದೆ ಎಂದರು. ಕಾರ್ಯಕ್ರಮ ಸಂಟಕ ಸೀತಾರಾಮ ಆಚಾರ್ಯ ಮಾತನಾಡಿದರು. ವಡ್ಡರ್ಸೆ ಗ್ರಾಪಂ ಅಧ್ಯಕ್ಷ ಲೋಕೇಶ್ ಕಾಂಚನ್ ಅಧ್ಯಕ್ಷತೆ ವಹಿಸಿದ್ದರು.
ಪ್ರಮುಖರಾದ ಡಾ.ವಿಶ್ವನಾಥ್, ಯೋಗೇಶ್‌ಕುವಾರ್, ವಿಜಯ್‌ಕುವಾರ್ ಶೆಟ್ಟಿ, ಗಣೇಶ ಶೇಟ್, ಬನ್ನಾಡಿ ಸೋಮನಾಥ ಹೆಗ್ಡೆ, ಜ್ಯೋತಿ ಇದ್ದರು. ಪಿಡಿಒ ಉಮೇಶ್ ನಿರೂಪಿಸಿದರು. ರೋಟರಿ ಕ್ಲಬ್ ಕಾರ್ಯದರ್ಶಿ ಶರಣಯ್ಯ ಹಿರೇಮಠ ವಂದಿಸಿದರು.