

ಬೆಂಗಳೂರು: ಶಾಲಾ ವಾರ್ಷಿಕೋತ್ಸವಗಳು ಅಲ್ಲಿನ ಮಕ್ಕಳ ಪ್ರತಿಭೆಯನ್ನು ಅನಾವರಣಗೊಳಿಸುವ ಉತ್ತಮ ವೇದಿಕೆಗಳು ಎಂದು ಮಹಾಲಕ್ಷ್ಮೀಪುರ ಶಾಸಕ ಕೆ.ಗೋಪಾಲಯ್ಯ ಹೇಳಿದ್ದಾರೆ.
ನಂದಿನಿ ಲೇಔಟ್ ಸ್ಯಾನ್ಸ್ ಪಬ್ಲಿಕ್ ಶಾಲೆಯು ಸುಮ್ಮನಹಳ್ಳಿ ಬಾಬು ಜಗಜೀವನ್‌ರಾಂ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಿರಿ ಕಿಡ್ಸ್ ಫೆಸ್ಟ್ 2025 ಶಾಲಾವಾರ್ಷಿಕೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡುತ್ತಿರುವ ಸ್ಯಾನ್ಸ್ ಪಬ್ಲಿಕ್ ಶಾಲೆ ಕಾರ್ಯ ಸ್ವಾಗತಾರ್ಹ. ಮಕ್ಕಳಲ್ಲಿ ಸಂಸ್ಕಾರ ಮತ್ತು ಸಾಮಾಜಿಕ ಮೌಲ್ಯಗಳನ್ನು ಬೆಳೆಸುವ ಜವಾಬ್ದಾರಿ ಶಾಲಾ ಶಿಕ್ಷಕರು ಮತ್ತು ಪೋಷಕರು ಇಬ್ಬರ ಮೇಲೂ ಇದೆ ಎಂದು ಶಾಸಕರು ತಿಳಿಸಿದರು.
ಡಾ ಆಂಜಿನಪ್ಪ ಮಾತನಾಡಿ, ಕ್ರಿಯಾ ರಹಿತರಿಗೆ ಕ್ರಿಯೆಯನ್ನು, ಜ್ಞಾನರಹಿತರಿಗೆ ಜ್ಞಾನಾಮೃತವನ್ನು ನೀಡುವ ವಿದ್ಯಾದೇಗುಲವಾದ ಸ್ಯಾನ್ಸ್ ಪಬ್ಲಿಕ್ ಶಾಲೆ ಕಾರ್ಯನಿರ್ವಹಿಸುತ್ತಿರುವುದು ಮಕ್ಕಳ ಪ್ರತಿಭೆಯನ್ನು ನೋಡಿದಾಗ ತಿಳಿಯುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಮುಖಂಡರಾದ ಎಸ್.ಕೇಶವಮೂರ್ತಿ, ವೆಂಕಟೇಶ್‌ಮೂರ್ತಿ, ಆಡಳಿತಾಧಿಕಾರಿ ಎಸ್.ಅಭಿಷೇಕ್, ಶಾಲಾ ಸಿಬಂದಿವರ್ಗ,ವಿದ್ಯಾರ್ಥಿಗಳು ಮತ್ತು ಪೋಷಕರು ಉಪಸ್ಥಿತರಿದ್ದರು.
"ಗುರುವಿಂದ ಬಂದುಗಳು ಗುರುವಿಂದ ದೈವಗಳು ಜಗಕ್ಕೆಲ್ಲ ಗುರುವಿಂದ ಮುಕ್ತಿ ಸರ್ವಜ್ಞ ಎನ್ನುವಂತೆ ಅಜ್ಞಾನದ ಕಳೆಯ ಕಿತ್ತು ಸುಜ್ಞಾನನದ ಬೀಜ ಬಿತ್ತಿ ಸದ್ಗುಣಗಳ ಗೊಬ್ಬರ ಹಾಕಿ ಸಮಾಜಕ್ಕೆ ಉತ್ತಮ ಪ್ರಜೆಗಳನ್ನಾಗಿ ಕೊಡುವಲ್ಲಿ ಶಾಲೆ, ಶಿಕ್ಷಕರು, ಪೋಷಕರು ಒಟ್ಟಾಗಿ ಕೆಲಸ ಮಾಡಬೇಕು." -ಶ್ರೀಕಂಠಪ್ಪ, ಶಾಲಾ ಮುಖ್ಯಸ್ಥರು