ದತ್ತಿನಿಧಿ-ಆರೋಗ್ಯ ನಿಧಿ ವಿತರಣೆ: ಶ್ರೀ ವಿನಾಯಕ ಮಿತ್ರ ಮಂಡಳಿ ಆಯೋಜನೆ

48
Published on

ಕಿನಿಗೋಳಿ: ಶ್ರೀ ವಿನಾಯಕ ಮಿತ್ರ ಮಂಡಳಿ ಪಕ್ಷಿಕೆರೆ ಮತ್ತು ಶ್ರೀ ವಿನಾಯಕ ಮಹಿಳಾ ಮಂಡಳಿ ಪಕ್ಷಿಕೆರೆ ಸಹಭಾಗಿತ್ವದಲ್ಲಿ ಸಾಧಕ ಸನ್ಮಾನ, ದತ್ತಿನಿಧಿ-ಆರೋಗ್ಯ ನಿಧಿ ವಿತರಣೆ, ಪ್ರತಿಭಾ ಪ್ರದರ್ಶನ ಕಾರ್ಯಕ್ರಮ ಗಣೇಶ ಕಲಾ ಮಂಟಪ ಪಕ್ಷಿಕೆರೆಯಲ್ಲಿ ನಡೆಯಿತು.

ವಾಸುದೇವ ಭಟ್ ಪಂಜ ಕಾರ್ಯಕ್ರಮ ಉದ್ಘಾಟಿಸಿದರು. ಪಿ.ಸಿ.ಎ.ಬ್ಯಾಂಕ್ ಹಳೆಯಂಗಡಿ ಅಧ್ಯಕ್ಷ ಸತೀಶ್ ಭಟ್ ಕೊಳುವೈಲು ಅಧ್ಯಕ್ಷತೆ ವಹಿಸಿದ್ದರು.

ಸ್ಟಾೃನಿ ಪಿಂಟೊ ಕಿನ್ನಿಗೋಳಿ ಹಾಗೂ ಯುವಕಾರ್ಯ ಮತ್ತು ಕ್ರೀಡಾ ಸಚಿವಾಲಯ ನೆಹರು ಯುವ ಕೇಂದ್ರ ಮಂಗಳೂರು ಆಡಳಿತಾಧಿಕಾರಿ ಜಗದೀಶ್ ಕೆ.ಅವರು ತರುಣ್ ಪಕ್ಷಿಕೆರೆ ಮತ್ತು ಜ್ಯೋತಿ ತಿಮ್ಮಕ್ಕಟ್ಟೆ ಅವರಿಗೆ ದತ್ತಿ ನಿಧಿ ವಿತರಿಸಿದರು. ಕೆಮ್ರಾಲ್ ಗ್ರಾ.ಪಂ.ಅಧ್ಯಕ್ಷ ಮಯ್ಯದಿ ಅಧ್ಯಕ್ಷ ಹಾಗೂ ಚರಣ್ ಜೆ.ಶೆಟ್ಟಿ ಕುಳಾಯಿಗುತ್ತು ಆರೋಗ್ಯ ನಿಧಿಯನ್ನು ಭಾಸ್ಕರ್ ಆಚಾರ್ಯ ಕಾಪಿಕಾಡು ಮತ್ತು ಸುಮಿತ್ರಾ ಪಕ್ಷಿಕೆರೆ ಅವರಿಗೆ ವಿತರಿಸಿದರು.

ಕಲಾ ಕ್ಷೇತ್ರ ಸಾಧಕರಾದ ಲೀಲಪ್ಪ ಶೇರಿಗಾರ, ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪದ್ಮನಾಭ ಶೆಟ್ಟಿಗಾರ್ ಪಕ್ಷಿಕೆರೆ, ನವೀನ್ ಶೆಟ್ಟಿ ನಲ್ಯಗುತ್ತು (ಕೃಷಿ ಕ್ಷೇತ್ರ), ಶ್ರೀ ಸುಬ್ರಹ್ಮಣ್ಯ ಮಹಾ ಗಣಪತಿ ಸ್ಪೋರ್ಟ್ಸ್ ಕ್ಲಬ್ ತೋಕೂರು (ಸಾಮಾಜಿಕ ಕ್ಷೇತ್ರ), ವಿದ್ಯಾಶ್ರೀ ಲೋಲಿತ್ ಶೆಟ್ಟಿಗಾರ್ ಸಾಗರಿಕ ಪಕ್ಷಿಕೆರೆ(ಶೈಕ್ಷಣಿಕ ಕ್ಷೇತ್ರ), ಬಹುಮುಖ ಪ್ರತಿಭೆ ಪ್ರೀತಿ ಹೊಸಕಾಡು, ಕೌಶಿಕ್ ಪಿ.ಶೆಟ್ಟಿಗಾರ್ ಪಕ್ಷಿಕೆರೆ(ಕ್ರೀಡಾ ಕ್ಷೇತ್ರ) ಅವರನ್ನು ಗೌರವಿಸಲಾಯಿತು.

ಸಂತ ಜೂದರ ಯಾತ್ರಿಕ ಕೇಂದ್ರ ಪಕ್ಷಿಕೆರೆ ಧರ್ಮಗುರು ಅನಿಲ್ ಅಲ್ಫ್ರೆಡ್ ಡಿಸೋಜ, ಕಟೀಲು ಹಾಲು ಉತ್ಪಾದಕರ ಸಂಘ ಅಧ್ಯಕ್ಷೆ ಅಮೂಲ್ಯಾ ಶೆಟ್ಟಿ, ಉದ್ಯಮಿ ಜಯರಾಮ ಆಚಾರ್ಯ, ಪಿ.ಸಿ.ಎ ಬ್ಯಾಂಕ್ ಹಳೆಯಂಗಡಿ ನಿರ್ದೇಶಕ ಸೇಸಪ್ಪ ಸಾಲ್ಯಾನ್ ಕಾಪಿಕಾಡು, ಗಣೇಶೋತ್ಸವ ಸಮಿತಿ ಅಧ್ಯಕ್ಷ ಗಣಪತಿ ಆಚಾರ್ಯ, ರಾಜೇಶ್ ಶೆಟ್ಟಿಗಾರ್, ಕಾರ್ಯದರ್ಶಿ ಮುರಳಿ ಶೆಟ್ಟಿಗಾರ್, ಮಹಿಳಾ ಮಂಡಳಿ ಅಧ್ಯಕ್ಷೆ ಸರಸ್ವತಿ ದಾಸ್, ಕಾರ್ಯದರ್ಶಿ ಗೀತಾ ಶೆಟ್ಟಿ, ಜಂಟಿ ಸಂಸ್ಥೆ ಸದಸ್ಯರು ಉಪಸ್ಥಿತರಿದ್ದರು.

ಸಂಸ್ಥೆ ಗೌರವಾಧ್ಯಕ್ಷ ಧನಂಜಯ ಪಿ.ಶೆಟ್ಟಿಗಾರ್ ಸಾಗರಿಕ ಪ್ರಸ್ತಾವನೆಗೈದರು. ರಾಜೇಂದ್ರ ಪ್ರಸಾದ್ ನಿರೂಪಿಸಿದರು, ಯಜ್ಞೇಶ್ ಪಿ.ಶೆಟ್ಟಿಗಾರ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net