ಟ್ಯಾಲೆಂಟ್ ಕ್ವೆಸ್ಟ್ ಇಂಗ್ಲಿಷ್ ಫೆಸ್ಟ್

sanmana
ಪಡುಕುಡೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಟ್ಯಾಲೆಂಟ್ ಕ್ವೆಸ್ಟ್ ಇಂಗ್ಲಿಷ್ ಫೆಸ್ಟ್‌ನಲ್ಲಿ ಪಡುಕುಡೂರು ಬೀಡು ಎಂ.ಡಿ. ಅಧಿಕಾರಿ ಪ್ರತಿಮೆ ಪ್ರತಿಷ್ಠಾಪನಾ ಸಮಿತಿ ಪ್ರಧಾನ ಕಾರ್ಯದರ್ಶಿ ಪಡುಪರ್ಕಳ ಹರೀಶ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
Published on

ಹೆಬ್ರಿ: ಪಡುಕುಡೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ಟ್ಯಾಲೆಂಟ್ ಕ್ವೆಸ್ಟ್ ಇಂಗ್ಲಿಷ್ ಫೆಸ್ಟ್ ನಡೆಯಿತು.

ಶಾಲಾಭಿವೃದ್ಧಿ ಸಮಿತಿ ಮಾಜಿ ಅಧ್ಯಕ್ಷ ಮಂಡಾಡಿಜಡ್ಡು ಭಾಸ್ಕರ ಶೆಟ್ಟಿ ಪಡುಕುಡೂರು ಉದ್ಘಾಟಿಸಿದರು. ಸಮಿತಿ ಅಧ್ಯಕ್ಷ ರವಿ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪಡುಕುಡೂರು ಬೀಡು ಎಂ.ಡಿ ಅಧಿಕಾರಿ ಪ್ರತಿಮೆ ಪ್ರತಿಷ್ಠಾಪನಾ ಸಮಿತಿ ಪ್ರಧಾನ ಕಾರ್ಯದರ್ಶಿ ಪಡುಪರ್ಕಳ ಹರೀಶ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಮುನಿಯಾಲು ಲಯನ್ಸ್ ಕ್ಲಬ್ ಶಂಕರ ಶೆಟ್ಟಿ, ಗ್ರಾಪಂ ಸದಸ್ಯರಾದ ಸಂತೋಷ ನಾಯ್ಕ, ತಾರಾವತಿ ಶೆಟ್ಟಿ, ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷ ಹರೀಶ ಪೂಜಾರಿ, ಹಳೇ ವಿದ್ಯಾರ್ಥಿ ಸಂಘ ಅಧ್ಯಕ್ಷ ಪ್ರಸನ್ನ ಶೆಟ್ಟಿ ಜಯಲೀಲಾ, ವಿವಿಧ ಪ್ರಮುಖರಾದ ಶ್ರೀನಿವಾಸ ಆಚಾರ್ಯ, ಶಂಕರ ಶೆಟ್ಟಿ ಮಾವಿನಕಟ್ಟೆ, ಚಿತ್ರಾ, ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಸಂಘ ಸಂಸ್ಥೆ ಪ್ರಮುಖರು, ಶಿಕ್ಷಕರು, ಮುಖ್ಯ ಶಿಕ್ಷಕ ಹರೀಶ್ ಪೂಜಾರಿ ಉಪಸ್ಥಿತರಿದ್ದರು. ವಿಜೇತರ ಪಟ್ಟಿಯನ್ನು ಸುಜಾತಾ ಶೋಭಾ, ಭಾವನಾ ವಾಚಿಸಿದರು. ಶಾಲಿನಿ ಸುಕುಮಾರ್ ಆಚಾರ್ಯ ನಿರೂಪಿಸಿದರು. ಹರೀಶ್ ಪೂಜಾರಿ ಎಸ್. ಸ್ವಾಗತಿಸಿದರು. ಸುದರ್ಶನ ಶೆಟ್ಟಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net