ಮಾದಕ ವ್ಯಸನ ವಿರುದ್ಧ ಸಂಘಟಿತ ಹೋರಾಟ : ಹನೀಫ್ ಅಭಿಪ್ರಾಯ

madarasa
Published on

ವಿಜಯವಾಣಿ ಸುದ್ದಿಜಾಲ ಉಳ್ಳಾಲ

ಒಂದೆಡೆ ನಮ್ಮ ಮಕ್ಕಳು ಮಾದಕ ವ್ಯಸನಕ್ಕೆ ಬಲಿಯಾಗುತ್ತಿದ್ದರೆ, ಮತ್ತೊಂದೆಡೆ ನೂತನವಾದಿಗಳ ಸೆಳೆತಕ್ಕೆ ಒಳಗಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ 28 ಮೊಹಲ್ಲಾದವರು ಒಗ್ಗೂಡಿ ಮಾದಕ ವ್ಯಸನದ ವಿರುದ್ಧ ಹೋರಾಡಿದರೆ ಜಮಾಅತಿನ ಚಿತ್ರಣ ಬದಲಾಯಿಸಲು ಸಾಧ್ಯ ಎಂದು ಉಳ್ಳಾಲ ದರ್ಗಾ ಅಧ್ಯಕ್ಷ ಬಿ.ಜಿ.ಹನೀಫ್ ಹೇಳಿದರು.

ಉಳ್ಳಾಲ ಮೇಲಂಗಡಿ ಮುಹಿಯದ್ದೀನ್ ಜುಮಾ ಮಸೀದಿ ಮತ್ತು ಖಂಝುಲ್ ಉಲೂಮ್ ಮದ್ರಸಾ ವತಿಯಿಂದ ಪ್ರವಾದಿವರ್ಯರ ಜನ್ಮದಿನ ಪ್ರಯುಕ್ತ ಭಾನುವಾರ ಮದ್ರಸಾ ಮಕ್ಕಳ ಪ್ರತಿಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮಸೀದಿಯ ಸದರ್ ಅಮೀನ್ ಉಸ್ತಾದ್ ಕಾರ್ಯಕ್ರಮ ಉದ್ಘಾಟಿಸಿದರು. ಮಸೀದಿ ಅಧ್ಯಕ್ಷ ಮುಸ್ತಫ ಅಬ್ದುಲ್ಲ, ದರ್ಗಾ ಪ್ರಧಾನ ಕಾರ್ಯದರ್ಶಿ ಶಿಹಾಬುದ್ದೀನ್ ಸಖಾಫಿ, ಜತೆ ಕಾರ್ಯದರ್ಶಿ ಇಸಾಕ್, ಕೋಶಾಧಿಕಾರಿ ನಾಝಿಮ್ ಮುಕ್ಕಚ್ಚೇರಿ, ಅರಬಿಕ್ ಟ್ರಸ್ಟ್ ಕಾರ್ಯದರ್ಶಿ ಬಶೀರ್ ಸಖಾಫಿ, ಉಪಾಧ್ಯಕ್ಷ ಅಶ್ರಫ್ ಕೋಡಿ, ಎಸ್‌ವೈಎಸ್ ಅಧ್ಯಕ್ಷ ಕೆ.ಎಸ್.ಮೊಯಿದ್ದೀನ್, ಮಸೀದಿ ಮಾಜಿ ಅಧ್ಯಕ್ಷ ಫಾರೂಕ್ ಉಳ್ಳಾಲ್, ಉಪಾಧ್ಯಕ್ಷ ಅಬ್ದುಲ್ ರಹ್ಮಾನ್ ಅದ್ದಾಮ, ಕಾರ್ಯದರ್ಶಿ ರಹ್ಮಾನ್, ಜತೆ ಕಾರ್ಯದರ್ಶಿ ಮಯ್ಯದ್ದಿ, ಕೋಶಾಧಿಕಾರಿ ರಶೀದ್, ಸಮಿತಿ ಸದಸ್ಯರಾದ ಚೆರೆಮೋನು, ಝೈನುದ್ದೀನ್, ಅನ್ಸಾರ್, ಸಲಾಂ ಉಸ್ತಾದ್, ಅಶ್ರಫ್ ಉಸ್ತಾದ್, ಅಶ್ರಫ್ ಸಖಾಫಿ ಉಸ್ತಾದ್, ಸಿರಾಜ್ ಉಸ್ತಾದ್, ಸತ್ತಾರ್ ಉಸ್ತಾದ್, ಉಸ್ಮಾನ್ ಉಸ್ತಾದ್ ಮೊದಲಾದವರು ಉಪಸ್ಥಿತರಿದ್ದರು.

ಅರಬಿಕ್ ಟ್ರಸ್ಟ್ ಜತೆ ಕಾರ್ಯದರ್ಶಿ ಜಲಾಲ್ ತಂಙಳ್ ದುವಾ ನೆರವೇರಿಸಿದರು. ಸಲಾಂ ಮದನಿ ಉಸ್ತಾದ್ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net