

ಅಳವಂಡಿ: ಮಕ್ಕಳು ದೇಶದ ಸಂಪತ್ತು. ಮಗುವಿನಲ್ಲಿ ಇರುವ ಪ್ರತಿಭೆಯನ್ನು ಅನಾವರಣಗೊಳಿಸುವ ಜವಾಬ್ದಾರಿ ಪಾಲಕರು, ಶಿಕ್ಷಕರದ್ದು ಎಂದು ಗ್ರಾಪಂ ಸದಸ್ಯ ಗುರುಬಸವರಾಜ ಹಳ್ಳಿಕೇರಿ ತಿಳಿಸಿದರು.
ಗ್ರಾಮದ ಶ್ರೀ ಸಿದ್ದೇಶ್ವರ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಗ್ರಾಪಂ ಅಳವಂಡಿಯಿಂದ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಹಾಗೂ ರಸಪ್ರಶ್ನೆ, ಪ್ರಬಂಧ, ಭಾಷಣ, ನೃತ್ಯ ಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದರು.
ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಗ್ರಾಪಂ ಕೂಡ ಕೈಜೋಡಿಸಿದ್ದು, ಇದರ ಉಪಯೋಗವನ್ನು ಮಕ್ಕಳು ಪಡೆದುಕೊಳ್ಳಬೇಕು. ತಮ್ಮಲ್ಲಿರುವ ಪ್ರತಿಭೆ ಸಾದರಪಡಿಸಬೇಕು. ಮಕ್ಕಳ ಪ್ರತಿಭೆ ಗುರುತಿಸುವಲ್ಲಿ ನಿರ್ಣಾಯಕರ ಪಾತ್ರ ಅತಿಮುಖ್ಯ ಎಂದರು.
ಮುಖ್ಯ ಶಿಕ್ಷಕ ಎಲ್ಲಪ್ಪ ಬಂಡಿ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ಶಂಕ್ರಮ್ಮ ಜೋಗಿನ, ಉಪಾಧ್ಯಕ್ಷೆ ಶಾರವ್ವ ಇಳಿಗೇರ, ಪಿಡಿಒ ಕೊಟ್ರಪ್ಪ ಅಂಗಡಿ, ಸಿಆರ್‌ಪಿ ವಿಜಯಕುಮಾರ, ಕಾರ್ಯದರ್ಶಿ ಬಸವರಾಜ ಪ್ರಮುಖರಾದ ಹನುಮಂತ ಲಮಾಣಿ, ಅನ್ವರ ಗಡಾದ, ವಸಂತ, ವಿಶ್ವನಾಥ, ರೇಣುಕಪ್ಪ, ಹನುಮಂತ, ಡಿ.ಜಿ.ಲಕ್ಕನಗೌಡರ, ತೋಟಯ್ಯ, ಮಲ್ಲಪ್ಪ, ಹನುಮಪ್ಪ, ಗವಿಸಿದ್ದಪ್ಪ, ಇಸ್ಮಾಯಿಲ್, ಸತೀಶ, ಆನಂದರಡ್ಡಿ, ಸತೀಶ, ನಾಗರಾಜ, ಶಂಕ್ರಪ್ಪ, ಹನುಮಂತ, ರಮೇಶ, ಮೈಲಾರಪ್ಪ, ರಾಮಣ್ಣ, ಮಹಾಂತಮ್ಮ, ನೀಲಪ್ಪ, ಬಸವರಾಜ ಇತರರಿದ್ದರು.