ಹನುಮಂತು ಗೆಲುವಿಗೆ ZEE ಕನ್ನಡ ಅಭಿನಂದನೆ! ಅದಮ್ಯ ಪ್ರತಿಭೆಯನ್ನು ಬೆಳಕಿಗೆ ತಂದ ಜೀ ಕನ್ನಡಕ್ಕೆ ನಿಮ್ಮ ಬಗ್ಗೆ ಹೆಮ್ಮೆ ಇದೆ! Bigg Boss Winner Hanumanthu

Bigg Boss Winner
Published on

Bigg Boss Winner Hanumanthu    : ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ   5 ಕೋಟಿ ವೋಟ್ ಪಡೆದು ಹನುಮಂತ ಅವರು ಗೆದ್ದು ಬೀಗಿದ್ದಾರೆ. ಜನ ಮೆಚ್ಚಿದ ಈ ಸ್ಪರ್ಧಿಗೆ ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ.  ಇದೀಗ ಜೀ ಕನ್ನಡ ವಾಹಿನಿಯ ಹನುಮಂತ ಅವರಿಗೆ ಶುಭಕೋರಿ ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್​​ ಮಾಡಿದೆ.

‘ಬಿಗ್ ಬಾಸ್ ಕನ್ನಡ’ ಇತಿಹಾಸದಲ್ಲಿ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಪಡೆದು ಗೆದ್ದ ಮೊದಲ ಸ್ಪರ್ಧಿ ಹನುಮಂತ ಆಗಿದ್ದಾರೆ. ಈ ಮೂಲಕ ಅವರು ದಾಖಲೆ ಬರೆದಿದ್ದಾರೆ.  ಬಿಗ್ ಬಾಸ್ ವೀಕ್ಷಕರ 5 ಕೋಟಿ ವೋಟ್ ಪಡೆದ ಹನುಮಂತು ಅವರನ್ನ ಕನ್ನಡಿಗರು ತುಂಬು ಹೃದಯದಿಂದ ಹಾರೈಸಿದ್ದಾರೆ. ಹನುಮಂತುಗೆ ಬಿಗ್ ಬಾಸ್ ಟ್ರೋಫಿ ಕೊಟ್ಟಿದ್ದಕ್ಕೆ ವೋಟ್ ಹಾಕಿದ ಪ್ರತಿಯೊಬ್ಬರು ತೃಪ್ತರಾಗಿದ್ದಾರೆ. ಈ ಹನುಮಂತು ಗೆದ್ದಿರುವ ಸಂಭ್ರಮವನ್ನು  ಸೋಶಿಯಲ್​​ ಮೀಡಿಯಾ ಮೂಲಕವಾಗಿ ಜೀ ಕನ್ನಡ ವಾಹಿನಿ ಕೂಡಾ ಸೆಲೆಬ್ರೆಟ್​​ ಮಾಡಿದೆ.

ಹನುಮಂತು ಕಲರ್ಸ್ ಕನ್ನಡ ವಾಹಿನಿಯ ಬಿಗ್ ಬಾಸ್ ಶೋಗೆ ಎಂಟ್ರಿ ಕೊಡುವ ಮೊದಲೇ 2 ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿದ್ದರು. ಜೀ ಕನ್ನಡ ವಾಹಿನಿಯ ಸರಿಗಮಪ, ಭರ್ಜರಿ ಬ್ಯಾಚುಲರ್ಸ್‌ನಲ್ಲಿ ಹನುಮಂತು ಕಾಣಿಸಿಕೊಂಡಿದ್ದರು. ಬಿಗ್ ಬಾಸ್ ಫಿನಾಲೆಯಲ್ಲಿ ಹನುಮಂತ ಗೆದ್ದ ಬಳಿಕ ಜೀ ಕನ್ನಡ ವಾಹಿನಿ ವಿಶೇಷ ಅಭಿನಂದನೆ ತಿಳಿಸಿದೆ.

ನಿಮ್ಮಂಥ ನೆಲಮೂಲದ ಪ್ರತಿಭೆಯನ್ನು ಹುಡುಕಿ, ಬೆಳಕಿಗೆ ತಂದ ಜೀ಼ ಕನ್ನಡ ನಿಮ್ಮ ಗೆಲುವನ್ನು ಸಂಭ್ರಮಿಸುತ್ತದೆ. ಹನುಮಂತ ಅವರೇ ನಿಮ್ಮ ಗೆಲುವಿಗೆ ಹಾರ್ದಿಕ ಅಭಿನಂದನೆಗಳು!

ಪ್ರೀತಿಯ ಹನುಮಂತ, ನಮ್ಮ ಸರಿಗಮಪ ವೇದಿಕೆಗೆ ಈ ಅದಮ್ಯ ಪ್ರತಿಭೆಯನ್ನು ಹುಡುಕಿ, ಬೆಳಕಿಗೆ ತಂದ ಜೀ ಕನ್ನಡಕ್ಕೆ ನಿಮ್ಮ ಬಗ್ಗೆ ಹೆಮ್ಮೆ ಇದೆ! ನಿಮ್ಮ ಗೆಲುವಿಗೆ ನಮ್ಮ ಅಭಿನಂದನೆಗಳು....ಎನ್ನುವ ಪೋಸ್ಟ್ ಅನ್ನು ಜೀ ಕನ್ನಡ ವಾಹಿನಿ ಹಂಚಿಕೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net