ಎಚ್.ಡಿ. ಕೋಟೆ: ಪಟ್ಟಣದ ಅಂಬೇಡ್ಕರ್ ಭವನದಲ್ಲಿ ತಾಲೂಕು ವಿಶ್ವಕರ್ಮ ಯುವ ಬ್ರಿಗೇಡ್ ವತಿಯಿಂದ ಸೆ.22ರಂದು ಬೆಳಗ್ಗೆ 10 ಕ್ಕೆ ಪ್ರತಿಭಾ ಪುರಸ್ಕಾರವನ್ನು ಹಮ್ಮಿಕೊಳ್ಳಲಾಗಿದೆ ಎಂದು ವಿಶ್ವಕರ್ಮ ಯುವ ಬ್ರಿಗೇಡ್‌ನ ಅಧ್ಯಕ್ಷ ಬಿ. ನಿಂಗರಾಜ್ ಆಚಾರ್ ತಿಳಿಸಿದರು.
ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹಿಸುವ ಹಿತದೃಷ್ಟಿಯಿಂದ ಸಮಾಜದ 90ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಅಭಿನಂದಿಸಲಾಗುತ್ತಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಾರ್ಯಕ್ರಮವನ್ನು ಶಾಸಕ ಅನಿಲ್ ಚಿಕ್ಕಮಾದು ಉದ್ಘಾಟಿಸಲಿದ್ದು, ಪ್ರತಿಭಾ ಪುರಸ್ಕಾರವನ್ನು ವಾಣಿಜ್ಯ ತೆರಿಗೆ ಇಲಾಖೆಯ ನಿವೃತ್ತ ಜಂಟಿ ಆಯುಕ್ತ ಮಾಳಿಗಾಚಾರ್ ನೆರವೇರಿಸಲಿದ್ದಾರೆ. ಮುಖ್ಯಭಾಷಣಕಾರರಾಗಿ ಖಾಸಗಿ ವಾಹಿನಿಯ ನಿರೂಪಕ ಅರುಣ್ ಸಿ. ಬಡಿಗೇರ್ ಮಾತನಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ನಿವೃತ್ತ ಚುನಾವಣಾ ಆಯುಕ್ತ ಪಿ.ಎನ್.ಶ್ರೀನಿವಾಸಾಚಾರಿ, ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಪಿ.ನಂಜುಂಡಿ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮೇಯರ್ ರಾಮಪ್ಪ ಕೃಷ್ಣಪ್ಪ ಬಡಿಗೇರ್, ವಿಶ್ವಕರ್ಮ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ನಂದಕುಮಾರ್ ಸೇರಿದಂತೆ ಹಲವು ಮಂದಿ ಆಗಮಿಸಲಿದ್ದಾರೆ ಎಂದರು.
ಬ್ರಿಗೇಡ್‌ನ ಮಾಜಿ ಅಧ್ಯಕ್ಷ ಕಿರಣ್, ಕಾರ್ಯದರ್ಶಿ ವಿನೋದ್ ಕುಮಾರ್, ಖಜಾಂಚಿ ವಸಂತ್‌ಕುಮಾರ್, ನಿರ್ದೇಶಕರಾದ ಶೇಖರ್, ಜನಾರ್ದನ್ ಇದ್ದರು.