ಸಹಕಾರಿ ಸಂಘಗಳಿಂದ ಆರ್ಥಿಕ ಅಭಿವೃದ್ಧಿ: ಸಚಿವ ಶಿವಾನಂದ ಪಾಟೀಲ್ ಅಭಿಮತ

IMG-20230821-WA0043
Published on


ವಿಜಯವಾಣಿ ಸುದ್ದಿಜಾಲ ಕಲಬುರಗಿ
ಸೌಹಾರ್ದ ಸಹಕಾರಿ ಸಂಘಗಳು ಆರ್ಥಿಕ ವಿಕಾಸದಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ ಎಂದು ಜವಳಿ, ಸಕ್ಕರೆ ಹಾಗೂ ಕೃಷಿ ಮಾರಕಟ್ಟೆ ಸಚಿವ ಶಿವಾನಂದ ಪಾಟೀಲ್ ಹೇಳಿದರು.
ನಗರದ ಜೆಸ್ಕಾಂ ಎದುರಿನ ಪ್ರೆÊಮ್ ಮಾಲ್‌ನಲ್ಲಿ ಭಾನುವಾರ ಸಂಜೆ ತಾಳಂಪಳ್ಳಿ ಸೌಹಾರ್ದ ಸಹಕಾರಿ ಸಂಘ ನಿಯಮಿತ ಕಲಬುರಗಿ ಶಾಖೆ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಎಲ್ಲರ ಹಿತವೇ ಸಹಕಾರ ತತ್ವ ಬಯಸುತ್ತದೆ. ಗಡಿ ಜಿಲ್ಲೆ ಬೀದರ್‌ನಲ್ಲಿ ಶುರುವಾದ ತಾಳಂಪಳ್ಳಿ ಸೌಹಾರ್ದ ಸಂಘ ವಿಭಾಗ ಕೇಂದ್ರ ಕಲಬುರಗಿಯಲ್ಲಿ ಸುಸಜ್ಜಿತ ಸ್ವಂತ ಕಟ್ಟಡದಲ್ಲಿ ಆರಂಭವಾಗಿ ತನ್ನ ಕಾರ್ಯ ವಿಸ್ತರಿಸಿಕೊಂಡಿದೆ. ಇಲ್ಲಿನ ಜನತೆ, ವ್ಯಾಪಾರೋದ್ಯಮಿಗಳ ಪ್ರಗತಿಗೆ ಕೊಡುಗೆ ನೀಡಲಿ ಎಂದು ಸದಾಶಯ ವ್ಯಕ್ತಪಡಿಸಿದರು.
ಮಾಜಿ ಸಚಿವ ರಾಜಶೇಖರ ಪಾಟೀಲ್ ಹುಮನಾಬಾದ್ ಉದ್ಘಾಟಿಸಿ ಮಾತನಾಡಿ, ಹುಮನಾಬಾದ್ ತಾಲೂಕಿನ ಹಳ್ಳಿಖೇಡ್ (ಬಿ) ಮೂಲದ ತಾಳಂಪಳ್ಳಿ ಪರಿವಾರವು ವಿವಿಧ ಉದ್ಯಮಗಳಲ್ಲಿ ತೊಡಗಿ ರಾಜ್ಯದಲ್ಲಿ ಹೆಸರು ಮಾಡಿದೆ. ಅನೇಕ ದುಡಿವ ಕೈಗಳಿಗೆ ಉದ್ಯೋಗ ಕಲ್ಪಿಸಿದೆ. ನಾಲ್ವರು ಸಹೋದರರು ತಾಳಂಪಳ್ಳಿ ಗ್ರೂಪ್ ಆಫ್ ಕಂಪನೀಸ್‌ಗೆ ನಾಲ್ಕು ಚಕ್ರದಂತೆ ನಿಂತು ಪ್ರಗತಿಪಥದತ್ತ ಒಯ್ಯುತ್ತಿರುವುದು ಮಾದರಿಯಾಗಿದೆ ಎಂದು ಬಣ್ಣಿಸಿದರು.
ವಿಧಾನ ಪರಿಷತ್ ಸದಸ್ಯರಾದ ಡಾ.ಚಂದ್ರಶೇಖರ ಪಾಟೀಲ್,ಭೀಮರಾವ ಪಾಟೀಲ್, ಕ್ರೆಡಲ್ ಮಾಜಿ ಅಧ್ಯಕ್ಷ ಚಂದು ಪಾಟೀಲ್, ಪ್ರಮುಖರಾದ ವೀರಶೆಟ್ಟಿ ಪಾಟೀಲ್ ಸಪ್ನಾ, ಸಂತೋಷ ಬಿಲಗುಂದಿ, ವೀರಣ್ಣ ಪಾಟೀಲ್, ಅಭಿಷೇಕ ಪಾಟೀಲ್, ಸುಭಾಷ ಬಿಜಾಪುರ, ಶರಣು ಮೋದಿ, ಸೋಮಶೇಖರ ಪಾಟೀಲ್ ಗಾದಗಿ, ಡಾ.ಎಸ್.ಎನ್.ಮಠ, ಡಾ.ಎಸ್.ಬಿ.ಕಾಮರಡ್ಡಿ, ರವಿ ಮಲಶೆಟ್ಟಿ, ಸರ‍್ಯಕಾಂತ ಅಲ್ಮಾಜೆ, ಜೈರಾಜ ಖಂಡ್ರೆ, ವೈಜಿನಾಥ ಬಿರಾದಾರ, ಗಂಗಾಧರ ಹುಬ್ಳಿ, ತಾಳಂಪಳ್ಳಿ ಗ್ರೂಪ್ಸ್ನ ದಿಲೀಪಕುಮಾರ ತಾಳಂಪಳ್ಳಿ, ಧನರಾಜ ತಾಳಂಪಳ್ಳಿ,ದೇವರಾಜ ತಾಳಂಪಳ್ಳಿ, ಸಂತೋಷಕುಮಾರ ತಾಳಂಪಳ್ಳಿ, ಮಹೇಶ ತಾಳಂಪಳ್ಳಿ, ಶಿವಕುಮಾರ ತಾಳಂಪಳ್ಳಿ, ಆಕಾಶ ತಾಳಂಪಳ್ಳಿ, ನಿಹಾಲ್ ತಾಳಂಪಳ್ಳಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net