ಆನೆಗುಂದಿ ಮಠದಲ್ಲಿ ತಾಳಮದ್ದಲೆ ಸಪ್ತಾಹ

Yakshagana Clip Art
Published on

ಪಡುಬಿದ್ರಿ: ಪಡುಕುತ್ಯಾರಿನಲ್ಲಿರುವ ಕಟಪಾಡಿ ಶ್ರೀಮದ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠದಲ್ಲಿ ಜಿ.ಟಿ.ಆಚಾರ್ಯ ಮುಂಬೈ ಮತ್ತು ಜನಾರ್ದನ ಆಚಾರ್ಯ ಕನ್ಯಾನ ಸಂಯೋಜಕತ್ವದಲ್ಲಿ ಡಿ.23ರಿಂದ 29ರವರೆಗೆ ಯಕ್ಷಗಾನ ತಾಳಮದ್ದಲೆ ಸಪ್ತಾಹ ನಡೆಯಲಿದೆ.

ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠದ ಜಗದ್ಗುರು ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿ 23ರಂದು ಮಧ್ಯಾಹ್ನ 2.30ಕ್ಕೆ ಸಪ್ತಾಹ ಉದ್ಘಾಟಿಸುವರು. ಯಕ್ಷಗಾನ ಚಿಂತಕ ಎಂ.ನಾ.ಚಂಬಲ್ತಿಮಾರ್ ಕುಂಬಳೆ ಭಾಗವಹಿಸುವರು.

ಅಂಗದ ಸಂಧಾನ, ಶಲ್ಯ ಸಾರಥ್ಯ, ಜಾಂಬವತಿ ಕಲ್ಯಾಣ, ಗುರುದಕ್ಷಿಣೆ, ಊರ್ವಶಿ ಶಾಪ, ಸಮರ ಸನ್ನಾಹ, ಸುಧನ್ವಾರ್ಜುನ ಯಕ್ಷಗಾನ ಪ್ರಸಂಗ ಪ್ರಸ್ತುತಗೊಳ್ಳಲಿವೆ. 29ರಂದು ನಡೆಯುವ ಸಮಾರೋಪದಲ್ಲಿ ಯಕ್ಷಗಾನ ಕಲಾ ಪೋಷಕರು ಭಾಗವಹಿಸುವರು ಎಂದು ಆನೆಗುಂದಿ ಪ್ರತಿಷ್ಠಾನದ ಅಧ್ಯಕ್ಷ ವಿ.ಶ್ರೀಧರ ಆಚಾರ್ಯ ವಡೇರಹೋಬಳಿ, ಪ್ರಧಾನ ಕಾರ್ಯದರ್ಶಿ ಲೋಕೇಶ್ ಎಂ.ಬಿ.ಆಚಾರ್ ಕಂಬಾರ್, ಕೋಶಾಧಿಕಾರಿ ಅರವಿಂದ ವೈ ಆಚಾರ್ಯ ಬೆಳುವಾಯಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net